ಚಿಕ್ಕಬಳ್ಳಾಪುರ, ಫೆ 20 (DaijiworldNews/HR): ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ತಪ್ಪಲಿನಿಂದ ಜಾರಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ಯುವಕನನ್ನು ವಾಯುಪಡೆಯ ಹೆಲಿಕ್ಯಾಪ್ಟರ್ ಬಳಸಿ ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.
ನಂದಿಬೆಟ್ಟದ ತಪ್ಪಲಿನಿಂದ ಜಾರಿ ಬಿದ್ದ ಯುವಕನನ್ನು ನಿಶಾಂತ್ ಗುಲ್ಲಾ ಎಂದು ಗುರುತಿಸಲಾಗಿದೆ.
ಯುವಕ ದುರ್ಗಮ ಪ್ರದೇಶದಲ್ಲಿ ಜಾರಿ ಬಿದ್ದಿರೋದ್ರಿಂದ ಆತ ರಕ್ಷಣಾ ಕಾರ್ಯಚರಣೆಗೆ ಭಾರೀ ತೊಂದರೆಯಾಗಿದ್ದು, ಯುವಕ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಪ್ರಾಣ ರಕ್ಷಣೆಗೆ ಮೊರೆ ಇಟ್ಟಿದ್ದ.
ಇನ್ನು ನಿಶಾಂತ್ ನನ್ನು ಅಗ್ನಿಶಾಮಕ, ಎಸ್ಡಿಆರ್ ಎಫ್, ಎನ್ಡಿಆರ್ ಎಫ್ ಮತ್ತು ಜಿಲ್ಲಾಡಳಿತವು ಸಮನ್ವಯದಿಂದ ಜಂಟಿ ಕಾರ್ಯಚರಣೆ ನಡೆಸಿ ವಾಯುಸೇನೆ ಸಹಕಾರದಿಂದ ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.