ಕೀವ್, ಫೆ 20 (DaijiworldNews/KP): ಪೂರ್ವ ಯುರೋಪ್ ರಾಷ್ಟ್ರ ಉಕ್ರೇನ್ನಲ್ಲಿ ಉಳಿಯುವುದು ತೀರಾ ಅಗತ್ಯವಲ್ಲ ಎಂದಾದರೆ, ಭಾರತೀಯ ವಿದ್ಯಾರ್ಥಿಗಳು ಮತ್ತು ಪ್ರಜೆಗಳು ಭಾರತಕ್ಕೆ ತಾತ್ಕಾಲಿಕವಾಗಿ ಹಿಂದಿರುಗಬೇಕು ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಹೇಳಿದೆ.
ಸಾಂದರ್ಭಿಕ ಚಿತ್ರ
ಉಕ್ರೇನ್ ಸೃಷ್ಟಿಯಾಗುದ್ದ ಉದ್ವಿಗ್ನ ಸ್ಥಿತಿ ಎರಡು ದಿನಗಳ ಹಿಂದೆ ಶಾಂತಗೊಂಡಿತ್ತು, ಆದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರಷ್ಯಾ ಬೆಂಬಲಿತ ಪ್ರತ್ಯೇಕತವಾದಿಗಳು ರಷ್ಯಾ ಗಡಿಯಲ್ಲಿ ಉಕ್ರೇನ್ನ ಸೈನಿಕನೊಬ್ಬನನ್ನು ಹತ್ಯೆಗೈದಿದ್ದಾರೆ.
ಸದ್ಯ ಉಕ್ರೇನ್ನಲ್ಲಿ ಯುದ್ಧದ ಕರಿಛಾಯೆ ಮೂಡತೊಡಗಿದ್ದು, ರಷ್ಯಾ ಯಾವುದೇ ಸಮಯದಲ್ಲೂ ಆಕ್ರಮಣ ನಡೆಸುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಭಾರತೀಯರು ಯಾವುದೇ ವಾಣಿಜ್ಯ ಅಥವಾ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಹಿಂದಿರುಗಬಹುದು ಎಂದು ತಿಳಿಸಿದೆ.
ಇನ್ನು ಭಾರತೀಯ ವಿದ್ಯಾರ್ಥಿಗಳು ಚಾರ್ಟರ್ ಫ್ಲೈಟ್ಗಳ ಮಾಹಿತಿಯನ್ನು ಪಡೆಯುಕೊಳ್ಳುವಂತೆ ಹಾಗೂ ರಾಯಭಾರಿ ಕಚೇರಿಯ ಫೇಸ್ಬುಕ್, ವೆಚ್ಸೈಟ್ ಮತ್ತು ಟ್ವೀಟರ್ಗಳ ಮೇಲೆ ಗಮನ ಇಟ್ಟಿರುವಂತೆ ಸೂಚಿಸಿದ್ದಾರೆ.
ಅಲ್ಲದೆ ಮಾಹಿತಿ ಮತ್ತು ಸಹಾಯದ ಅಗತ್ಯವಿದ್ದಲ್ಲಿ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ನೀಡಿದ್ದಾರೆ.