ಲಖನೌ, ಫೆ 20 (DaijiworldNews/KP): ಉತ್ತರ ಪ್ರದೇಶದ ಕಾನ್ಪುರ ಮೇಯರ್ ಪ್ರಮೀಳ ಪಾಂಡೆ ತಮ್ಮ ಮೊಬೈಲ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸದ್ಯ ಅವರ ವಿರುದ್ದ ಪ್ರಕರಣ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಇಂದು ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಈ ವೇಳೆ ಮತಚಲಾಯಿಸಲು ಬಂದ ಮೇಯರ್ ಸೆಲ್ಫಿ ಕ್ಲಿಕ್ಕಿಸಿ ವಿಡಿಯೋ ತೆಗೆದಿದ್ದಾರೆ.
ಇನ್ನು ಮೇಯರ್ ಪ್ರಮೀಳಾ ಪಾಂಡೆ ಮತಗಟ್ಟೆಯೊಳ್ಳಗೆ ತಮ್ಮ ಮೊಬೈಲ್ನ್ನು ತೆಗೆದುಕೊಂಡು ಹೋಗಿ ಮತದಾನ ಮಾಡುವಾಗ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಶರ್ಮಾ ಹೇಳಿದ್ದಾರೆ.
ಅಲ್ಲದೆ ಮತ್ತೋರ್ವ ಬಿಜೆಪಿ ನಾಯಕ, ಯುವ ಮೋರ್ಚಾದ ಮಾಜಿ ನಗರ ಅಧ್ಯಕ್ಷ ನವಾಬ್ ಸಿಂಗ್ ವಿರುದ್ಧವೂ ಮತಗಟ್ಟೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿರುವ ಆರೋಪ ಕೇಳಿಬಂದಿದೆ.
ಸದ್ಯ ಚುನಾವಣೆ ನಿಯಮಗಳ ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಮೇಯರ್ ಪ್ರಮೀಳ ಪಾಂಡೆ ವಿರುದ್ದ ಪ್ರಕರಣ ದಾಖಲಿಸಲಾಗಿದೆ.