ಹಾರ್ಡೋಯ್, ಫೆ 20 (DaijiworldNews/KP): ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರವು ಭಯೋತ್ಪಾದನೆಯಲ್ಲಿ ತೊಡಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಇಂದು ಹರ್ದೋಯ್ನಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅದರಲ್ಲೂ ಹಿಂದಿನ ಸಮಾಜವಾದಿ ಪಕ್ಷದ ಸರ್ಕಾರವು ಭಯೋತ್ಪಾದನೆಯಲ್ಲಿ ತೊಡಗಿರುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲು ಪ್ರಯತ್ನಿಸುತ್ತಿದೆ, ಅಲ್ಲದೆ ನಾಡ ಪಿಸ್ತೂಲ್ ಬಳಸಲು ಅವಕಾಶ ನೀಡಿತ್ತು ಎಂದು ಆರೋಪಿಸಿದರು.
ಈ ವೇಳೆ 2008ರಲ್ಲಿ ನಡೆದ ಅಹಮದಾಬಾದ್ ಸರಣಿ ಸ್ಫೋಟಗಳನ್ನು ಸ್ಮರಿಸಿದ ಅವರು, ಸರಣಿ ಸ್ಫೋಟ 56 ಜನರನ್ನು ಬಲಿತೆಗೆದುಕೊಂಡಿತು ಮತ್ತು 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಕೆಲವು ಪಕ್ಷಗಳು ಅಂತಹ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂದು ಹೇಳಿದರು
ಅಲ್ಲದೆ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ನಾಡ ಪಿಸ್ತೂಲ್ ಬಳಸುವವರಿಗೆ ಮತ್ತು ಅದರ ಕಾರ್ಯಕರ್ತರಿಗೆ ಮುಕ್ತ ಅವಕಾಶ ನೀಡಿದ ಬಗ್ಗೆ ಇಲ್ಲಿನ ಜನರೇ ನೋಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇನ್ನು 2008ರಲ್ಲಿ ನಡೆದ ಅಹಮದಾಬಾದ್ ಪ್ರಕರಣಕ್ಕೆ ಸಂಬಂಧಿಸಿ ಫೆಬ್ರವರಿ 18 ರಂದು ಗುಜರಾತ್ನ ಅಹಮದಾಬಾದ್ನ ವಿಶೇಷ ನ್ಯಾಯಾಲಯವು ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ನ 38 ಸದಸ್ಯರಿಗೆ ಮರಣದಂಡನೆ ವಿಧಿಸಿದೆ. ಅಲ್ಲದೆ ಇತರ 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.