ಬಾಗಲಕೋಟೆ, ಫೆ 20 (DaijiworldNews/KP): ಆರ್ಎಸ್ ಎಸ್ 96 ವರ್ಷಗಳಿಂದ ಕಳಂಕ ಇಲ್ಲದೇ ದೇಶದ ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡಿದ್ದೇವೆ. ಸಿದ್ದರಾಮಯ್ಯನವರೆ ನೀವು ಬೇಕಾದರೆ ಬಿಜೆಪಿ ಬಗ್ಗೆ ಟೀಕೆ ಮಾಡಿ, ಆದರೆ, ಎಸ್ಎಸ್ಎಸ್ನಂತ ಶುದ್ಧ ಭಕ್ತಿ ಸಂಘಟನೆ ಬಗ್ಗೆ ಟೀಕಿಸುವ ನೈತಿಕತೆ ಇಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ ಎಸ್ 96 ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿದೆ, ಆದರೆ ಒಂದೇ ಒಂದು ಕಳಂಕ ಇಲ್ಲದೇ ದೇಶದ ಸುರಕ್ಷತೆ ದೃಷ್ಟಿಯಿಂದ ಕೆಲಸ ಮಾಡಿದ್ದೇವೆ, ಸಿದ್ದರಾಮಯ್ಯನವರೆ ನೀವು ಬೇಕಾದರೆ ಬಿಜೆಪಿ ಬಗ್ಗೆ ಟೀಕೆ ಮಾಡಿ, ಆದರೆ, ಎಸ್ಎಸ್ಎಸ್ನಂತ ಶುದ್ಧ ಭಕ್ತಿ ಸಂಘಟನೆ ಬಗ್ಗೆ ಹೀಯಾಳಿಸುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಿಜಾಬ್ ಕುರಿತು ವಿವಾದ ತೀವ್ರಗೊಳ್ಳಲು ರಾಜಕೀಯ ಪಕ್ಷಗಳೇ ಕಾರಣ. ಎಲ್ಲ ಪಕ್ಷಗಳೂ ಈ ವಿಷಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದರು.
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿತ್ತು. ಇದೀಗಾ ಕೊರೊನಾ ತೀವ್ರತೆ ಕಡಿಮೆಯಾಗಿ ತರಗತಿಗಳು ಆರಂಭಗೊಂಡಿತ್ತು, ಆದರೆ ಈ ಇಸ್ಲಾಮಿ ಶಕ್ತಿಗಗಳಾದ ಪಿಎಫ್ ಐ, ಸಿಎಫ್ಐ ಇವರಿಬ್ಬರೂ ವಿದ್ಯಾರ್ಜನೆ ಹಾಳು ಮಾಡಿದ್ದಾರೆ, ಇದು ಸರಿಯಲ್ಲ ಎಂದರು.
ಇನ್ನು ಮುಸ್ಲಿಂ ವಿದ್ಯಾರ್ಥಿನಿಯರು ನಿಮ್ಮ ಹಿಂದೆ ಇರುವ ಇಸ್ಲಾಮಿಕ್ ಶಕ್ತಿಗೆ ಬೆಲೆ ಕೊಡದೇ ಶಿಕ್ಷಣಕ್ಕೆ ಮಹತ್ವ ಕೊಡಿ. ನೀವು ಕೆಲಸಕ್ಕೆ ಹೋದರೆ ಅಲ್ಲಿ ಹಿಜಾಬ್ ಕೇಳುವುದಿಲ್ಲ, ಬದಲಾಗಿ ವಿದ್ಯೆ ಕೇಳುತ್ತಾರೆ. ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಿಬೇಕು. ಹಾಗೇ ನಿಮಗೆ ಧರ್ಮ ಅಲ್ಲ, ಉಪ ಜೀವನ ಮುಖ್ಯ ಎಂದರು.
ವಿದ್ಯಾರ್ಥಿಗಳು ಇಲ್ಲಿ ಉನ್ನತ ಶಿಕ್ಷಣ ಪಡೆದು ಫೈಲಟ್, ಐಎಎಸ್, ಐಪಿಎಸ್ನಲ್ಲಿ ಕೆಲಸ ಪಡೆದು ಮೇಲೆ ಬರಬಹುದು. ಆದರೆ, ನಿಮ್ಮನ್ನು ಹಿಂದೆ ಎಳೆಯುವ ಎಸ್ಡಿಪಿಐ, ಸಿಎಫ್ ಐ, ಪಿಎಫ್ಐಗೆ ಬಲಿಯಾಗಬೇಡಿ ಎಂದು ಹೇಳಿದರು.
ಕುಂಕುಮ, ಬಳೆ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರು ಪ್ರಶ್ನೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇಂದು ಕುಂಕುಮ, ಭಸ್ಮ, ಬಳೆ ಬಗ್ಗೆ ಮಾತಾಡುವ ಅವಿವೇಕಿಗಳು ನಮ್ಮ ಸಮಾಜದಲ್ಲಿ ಇದ್ದಾರೆ, ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಶೋಕಿಗಾಗಿ ಅಥವಾ ಫ್ಯಾಶನ್ಗಾಗಿ ಅಲ್ಲ. ಅಹಂಕಾರವೂ ಅಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಇದೆ. ಪರಂಪರೆ ಇದೆ ಎಂದರು.
ಇನ್ನು ಕೆಲವರು ಶಾಲೆಗಳಲ್ಲಿ ಆಚರಿಸುವ ಹಬ್ಬಗಳ ಬಗ್ಗೆ ಮಾತನಾಡುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಮವಸ್ತ್ರ ಅಂದರೆ ಬರಿ ಬಟ್ಟೆ. ಬಟ್ಟೆ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ ಬಳೆ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.