ಬೆಂಗಳೂರು, ಫೆ 20 (DaijiworldNews/HR): ಬೊಮ್ಮಾಯಿ ಏನು ವೇದಾಂತಿಯಾ? ಬೊಮ್ಮಾಯಿಗಿಂತ ಹಿರಿಯವ ನಾನು, ಬಿಜೆಪಿಯವರ ಮನಸ್ಥಿತಿ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ವಿಪಕ್ಷವಾಗಿರಲು ನೈತಿಕತೆ ಇಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ, ರಾಷ್ಟ್ರಧ್ವಜಕ್ಕೆ ಅವಮಾನ ಆದರೂ ಸುಮ್ಮನೆ ಕೂರಬೇಕಾ? ಇದರ ಬಗ್ಗೆ ಕೇಳಿದರೆ ಜವಾಬ್ದಾರಿ ಇಲ್ಲ ಅಂತಾರೆ. ರಾಷ್ಟ್ರಧ್ವಜ ಕ್ಕೆ ಅಗೌರವ ಮಾಡೋದು ದೇಶ ಭಕ್ತಿನಾ? ಅಂಥವರು ಸಚಿವರಾಗಿ ಇರಬೇಕಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷದವರು ಅವರಿಂದ ಕಲಿಯಬೇಕಾ? ನಮ್ಮ ಹೋರಾಟ ಮುಂದುವರೆಯಲಿದೆ. ಇದಾದ ಮೇಲೆ ನಾವು ಜನರ ಬಳಿ ಹೋಗುತ್ತೇವೆ. ಅವರು ಸಂವಿಧಾನಕ್ಕೆ ವಿರುದ್ದ ಇರುವವರು ಎಂದು ವಾಗ್ದಾಳಿ ನಡೆಸಿದ್ದಾರೆ.