ಕೋಲ್ಕತ, ಫೆ 20 (DaijiworldNews/KP): ಅಪ್ಪನಿಗೆ ಹೆದರಿ ಬಾಂಗ್ಲಾದೇಶದ 15 ವರ್ಷದ ಬಾಲಕಿಯೊಬ್ಬಳು ಫೆಬ್ರವರಿ 17ರಂದು ಬಾಂಗ್ಲಾ-ಭಾರತ ಅಂತಾರಾಷ್ಟ್ರೀಯ ಗಡಿ ದಾಟಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾಳೆ.
ಸಾಂದರ್ಭಿಕ ಚಿತ್ರ
ಇನ್ನು ಬಾಲಕಿಯನ್ನು ಬಾಂಗ್ಲಾದ ಜೆನಯ್ದಾಹ ಜಿಲ್ಲೆಯ ಬನ್ಸಬೇರಿಯಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಬಾಲಕಿಯ ಮನೆ ಅಂತಾರಾಷ್ಟ್ರೀಯ ಗಡಿಯಿಂದ 3ಕಿ.ಮೀ ದೂರವಿದ್ದು, ಆಕೆ ಮನೆಯಿಂದ ನಡೆದು ಬಂದು ಗಡಿ ದಾಟಿರುವುದಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.
ಸದ್ಯ ಆಕೆಯನ್ನು ಗಡಿ ಭದ್ರತಾ ಪಡೆಯ(ಬಿಎಸ್ಎಫ್) ಯೋಧರು ರಕ್ಷಿಸಿದ್ದು, ಚೈಲ್ಡ್ಲೈನ್ ಇಂಡಿಯಾ ಫೌಂಡೇಷನ್ ಹೆಸರಿನ ಎನ್ಜಿಒಗೆ ಹಸ್ತಾಂತರಿಸಿದ್ದಾರೆ.
ಇನ್ನು ಪ್ರತಿ ದಿನ ಅಪ್ಪ ಹೊಡೆಯುತ್ತಾನೆ ಎಂದು ಮನೆ ಬಿಟ್ಟು ಓಡಿ ಬಂದಿದ್ದೇನೆ. ನನ್ನನ್ನು ಮನೆಗೆ ಮಾತ್ರ ಕಳಿಹಿಸಬೇಡಿ ಎಂದು ಬಾಲಕಿ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಆಕೆಯನ್ನು ಎನ್ಜಿಒಗೆ ಹಸ್ತಾಂತರಿಸಲಾಯಿತು ಎಂದು ಗಡಿ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.