ಶೋಪಿಯಾನ್ , ಫೆ 20 (DaijiworldNews/MS): ಜಮ್ಮು - ಕಾಶ್ಮೀರದ ಶೋಪಿಯಾನ್ನಲ್ಲಿ ಉಗ್ರರ ವಿರುದ್ದ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಓರ್ವ ಶಂಕಿತ ಉಗ್ರ ಕೂಡಾ ಸಾವನ್ನಪ್ಪಿದ್ದಾನೆ.
ಹುತಾತ್ಮ ಯೋಧನನ್ನು ಸಂತೋಷ್ ಯಾದವ್ ಹಾಗೂ ಚವನ್ ರೋಮಿತ್ ತಾನಾಜಿ ಎಂದು ಗುರುತಿಸಲಾಗಿದೆ. ಇಬ್ಬರೂ ರಾಷ್ಟ್ರೀಯ ರೈಪಲ್ ದಳಕ್ಕೆ ಸೇರಿದವರು ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಇನ್ನು ಉಗ್ರರ ವಿರುದ್ದ ಶೋಪಿಯಾನದ್ ಝೈನಪೋರಾ ಪ್ರದೇಸದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.