ಬೆಂಗಳೂರು, ಫೆ 19 (DaijiworldNews/HR): ಸಿದ್ದರಾಮಯ್ಯ ಜಾತಿವಾಗಿ ಹಾಗೂ ಡಿ.ಕೆ.ಶಿವಕುಮಾರ್ ಗೂಂಡಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮನ್ನು ಬಿಟ್ಟು ಇನ್ಯಾರೂ ಮುನ್ನುಗ್ಗೋಕೆ ಸಾಧ್ಯವಿಲ್ಲ, ಮುಂಬರುವ ಚುನಾವಣೆಯಲ್ಲಿಯೂ ನಾವೇ ಗೆದ್ದು ವಿಧಾನಸೌಧಕ್ಕೆ ಹೋಗುತ್ತೇವೆ. ಬಿಜೆಪಿ ಗೆಲುವು ನಿಶ್ಚಿತ ಎಂದರು.
ವಿಧಾನಸಭೆಗೆ ಗೂಂಡಾ ಡಿ.ಕೆ.ಶಿವಕುಮಾರ್ ಬರ್ತಾರಾ? ಇಲ್ಲ ಜಾತಿವಾದಿ ಸಿದ್ದರಾಮಯ್ಯ ಬರ್ತಾರಾ? ಡಿಕೆಶಿ ಹಾಗೂ ಸಿದ್ದರಾಮಯ್ಯ ಬಡಿದಾಡಿಕೊಳ್ಳುತ್ತಿದ್ದಾರೆ. ಆ ಗೂಂಡಾ ಹಾಗೂ ಜಾತಿವಾದಿಗಳನ್ನು ಪಕ್ಕಕ್ಕೆ ಸರಿಸಬೇಕು ಎಂದಿದ್ದಾರೆ.