ನವದೆಹಲಿ, ಫೆ 19 (DaijiworldNews/KP): ಮಣಿಪುರದಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗದ ಕಾಂಗ್ರೆಸ್ ಇನ್ನು ಮುಂದೆ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದು ನೀವು ನಂಬುತ್ತೀರಾ? ಎಂದು ಕಾಂಗ್ರೆಸ್ ವಿರುದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾದ ನಡೆಸಿದರು.
ಮಣಿಪುರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ಮಣಿಪುರದಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗದ ಕಾಂಗ್ರೆಸ್ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದು ನೀವು ನಂಬುತ್ತೀರಾ? ಗಾಂಧಿ ಕುಟುಂಬದವರು ಇದುವರೆಗೂ ಪ್ರಯೋಜನಾತ್ಮಕ ಯೋಜನೆಯನ್ನು ರೂಪಿಸಿಲ್ಲ, ಎಂದು ಅವರು ಹೇಳಿದರು.
ರಾಹುಲ್ ಗಾಂಧಿಯವರ ಕುಟುಂಬವು ಮಣಿಪುರವನ್ನು ಎಟಿಎಂ ಆಗಿ ಬಳಸಿಕೊಂಡಿದೆ ಹೊರತು ರಾಜ್ಯದ ಹಿತ ದೃಷ್ಟಿಯಿಂದ ಯಾವುದೇ ಯೋಜನೆ ರೂಪಿಸಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಮಣಿಪುರಕ್ಕೆ ಅನ್ಯಾಯ ಮಾಡಿದೆ. ಇನ್ನು ಈವರೆಗೂ ರಾಜಕೀಯದಲ್ಲಿ ಶೌಚಾಲಯವು ಎಂದಿಗೂ ಅಜೆಂಡಾದ ಭಾಗವಾಗಿರಲಿಲ್ಲ, ಆದರೆ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಟ್ಟರು ಎಂದು ಹೇಳಿದರು.
ಕೇಂದ್ರ ಸರ್ಕಾರ ಈಗಾಗಲೇ ರೈತರಿಗೆ ಪ್ರತಿ ವರ್ಷ 6,000 ರೂ.ಗಳನ್ನು ನೀಡಲಾಗುತ್ತಿದೆ, ಆದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಣಿಪುರದ ರೈತರಿಗೆ ಹೆಚ್ಚುವರಿಯಾಗಿ 2,000 ರೂ. ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅಲ್ಲದೆ ಕಳೆದ 7 ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದೇಶದಲ್ಲಿ 60,000 ಸ್ಟಾರ್ಟ್ಅಪ್ಗಳ ಸೃಷ್ಟಿಗೆ ಉತ್ತೇಜನ ನೀಡಿದೆ, ಆದರೆ ಬಿಜೆಪಿ ಸರ್ಕಾರ ಮಣಿಪುರದಲ್ಲಿ ಸ್ಟಾರ್ಟ್ಅಪ್ಗಳಿಗಾಗಿ ಪ್ರತ್ಯೇಕವಾಗಿ 100 ಕೋಟಿ ರೂ. ಕಾರ್ಪಸ್ ಫಂಡ್ ರಚಿಸುವುದಾಗಿ ಘೋಷಿಸಿದ್ದಾರೆ.