ನವದೆಹಲಿ, ಫೆ 19 (DaijiworldNews/MS): ಗ್ಯಾಂಗ್ ಸ್ಟರ್ ದಾವೂದ್ ಇಬ್ರಾಹಿಂ ಭಾರತದ ರಾಜಕೀಯ ನಾಯಕರು ಮತ್ತು ಖ್ಯಾತ ಉದ್ಯಮಿಗಳನ್ನು ಗುರಿಯಾಗಿಸಿ ವಿಶೇಷ ಘಟಕವನ್ನು ರಚಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಹಿರಂಗಪಡಿಸಿದೆ.
ತನಿಖಾ ಸಂಸ್ಥೆ ಪ್ರಕಾರ, ಭಾರತದ ರಾಜಕೀಯ ನಾಯಕರು ಹಾಗೂ ಉದ್ಯಮಿಗಳ ಹೆಸರುಗಳು ದಾವೂದ್ ಇಬ್ರಾಹಿಂ ಹಿಟ್ ಲಿಸ್ಟ್ನಲ್ಲಿವೆ.
ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ಪ್ರಚೋದಿಸುವ ಉದ್ದೇಶದಿಂದ ಸ್ಫೋಟಕಗಳು ಮತ್ತು ಮಾರಕಾಸ್ತ್ರಗಳನ್ನು ಬಳಸಿ ದೇಶದ ಮೇಲೆ ದಾಳಿ ದಾವೂದ್ ಇಬ್ರಾಹಿಂ ಈ "ವಿಶೇಷ ಘಟಕ"ದ ಮೂಲಕ ಹೊಂಚು ರೂಪಿಸುತ್ತಿದ್ದಾನೆ ಎಂದು ತನಿಖಾ ಸಂಸ್ಥೆಯ ಎಫ್ಐಆರ್ ನಲ್ಲಿ ಬಹಿರಂಗಪಡಿಸಿದೆ.
ದಾವೂದ್ ಇಬ್ರಾಹಿಂ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಮುಂಬೈ ಮೇಲೆ ತನ್ನ ಗಮನವನ್ನು ಕೇಂದ್ರಿಕರಿಸಿದ್ದಾನೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇದಕ್ಕೆ ಪುಷ್ಟಿ ನಿಡುವಂತೆ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ವಿರುದ್ಧ ಇಡಿ ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು