ನವದೆಹಲಿ, ಫೆ 19 (DaijiworldNews/KP): ನಾಲ್ಕು ವರ್ಷಗಳ ಹಿಂದೆ ಬ್ರಿಟನ್ ರಾಜ ತಾಂತ್ರಿಕ ಅಧಿಕಾರಿಯಾಗಿ ಭಾರತಕ್ಕೆ ಬಂದ ಅಧಿಕಾರಿಯೊಬ್ಬರು ಭಾರತೀಯ ಮೂಲದ ಯವಕನನ್ನು ಪ್ರೀತಿಸಿ, ಭಾರತೀಯ ಸಂಸ್ಕೃತಿ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಸದ್ಯ ತಮ್ಮ ವಿವಾಹ ಸಮಾರಂಭದ ಸುಂದರವಾದ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ದಕ್ಷಿಣ ಏಷ್ಯಾದ ಪ್ರದೇಶದ ವಾಣಿಜ್ಯ ಉಪ ಆಯುಕ್ತರಾಗಿ ಕೆಲಸ ಮಾಡುತ್ತಿರುವ ರಿಯಾನ್ ಹ್ಯಾರಿಸ್ ಹೀಗೆ ದೇಶಿ ವಧುವಿನ ಗೆಟಪ್ನಲ್ಲಿ ಮಿಂಚಿದ್ದಾರೆ. ಸದ್ಯ ಇವರ ಫೋಟೋವನ್ನು ನೋಡಿ ದೇಶಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹ್ಯಾರಿಸ್ ಗಾಢವಾದ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿ, ಭಾರವಾದ ಆಭರಣಗಳು ಮತ್ತು ಮೆಹೆಂದಿಯೊಂದಿಗೆ ಆಕೆ ಥೇಟ್ ಉತ್ತರ ಭಾರತೀಯ ವಧುವಿನಂತೆ ಕಾಣುತ್ತಿದ್ದಾರೆ. ಇನ್ನು ಆಕೆಯ ಪತಿ ಕ್ರೀಂ ಬಣ್ಣದ ಶೇರ್ವಾನಿ ಸೆಟ್ ಹಾಗೂ ಕೆಂಪು ಟರ್ಬನ್ನಲ್ಲಿ ಮಿಂಚುತ್ತಿರು ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ತಾವೊಬ್ಬರೇ ಬಂದ ವೇಳೆ ತಮ್ಮ ಜೀವನ ಸಂಗಾತಿ ಇಲ್ಲಿಯವರೇ ಸಿಗಲಿದ್ದಾರೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳುವ ರಿಯಾನಾನ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
"ಇಲ್ಲಿ ನಾನು ಕಳೆಯುವ ಕ್ಷಣಗಳ ಬಗ್ಗೆ ಬಹಳ ಆಸೆಗಳು ಹಾಗೂ ಕನಸುಗಳನ್ನು ಕಂಡಿದ್ದೆ. ಆದರೆ ನನ್ನ ಜೀವನ ಸಂಗಾತಿಯನ್ನು ಇಲ್ಲಿಯೇ ಭೇಟಿ ಮಾಡಿ ಮದುವೆಯಾಗುತ್ತೇನೆ ಎಂದು ಎಂದೂ ಅಂದುಕೊಂಡಿರಲಿಲ್ಲ. ಭಾರತ ನನಗೆ ಎಲ್ಲವನ್ನು ಕೊಟ್ಟಿದೆ, ಆದರೆ ಇದೀಗಾ ನನ್ನ ಶಾಶ್ವತ ಮನೆಯಾಗಿದೆ," ಎಂದು ತಮ್ಮ ಸಂತಸವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.