ಲಕ್ನೋ, ಫೆ 19 (DaijiworldNews/KP): ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದ ಈಗ ಸಮಾಜವಾದಿ ಪಕ್ಷದ ಮೇಲಿಲ್ಲ, ಬದಲಾಗಿ ಅವರ ಸೊಸೆಯ ಪಕ್ಷದ ಮೇಲಿದೆ ಎಂದು ಬಿಜೆಪಿ ನಾಯಕ ಪ್ರೇಮ್ ಶುಕ್ಲಾ ಹೇಳಿದರು.
ಇನ್ನು ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ, ಆದರೆ ಕಳೆದ ಲಕ್ನೋದ ಕ್ಯಾಂಟ್ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಪಕ್ಷವು ಮುಲಾಯಂ ಸಿಂಗ್ ಅವರನ್ನು ಸರಿಯಾಗಿ ನಡೆಸಿಕೊಳ್ಳದ ಕಾರಣ ಅವರ ಆಶೀರ್ವಾದ ಈಗ ಸಮಾಜವಾದಿ ಪಕ್ಷದ ಮೇಲಿಲ್ಲ, ಬದಲಾಗಿ ಅವರ ಸೊಸೆಯ ಪಕ್ಷದ ಮೇಲಿದೆ ಎಂದು ಹೇಳಿದರು.
ಇನ್ನು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಮಣಿಪುರ ಜಿಲ್ಲೆಯ ಕಾರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬೇರೆ ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ ಎಂದು ಹೇಳಿದರು.
ಅಲ್ಲದೆ ಸಮಾಜವಾದಿ ಪಕ್ಷದ ಸ್ಥಿತಿ ಹೇಗಿದೆ ಅಂದರೆ ಅಖಿಲೇಶ್ ಅವರು ತಮ್ಮೊಂದಿಗೆ ಮುಲಾಯಂ ಸಿಂಗ್ ಯಾದವ್ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗಬೇಕಾಗಿದೆ ಎಂದು ವ್ಯಂಗ್ಯವಾಡಿದರು.