ಬೆಂಗಳೂರು, ಫೆ 19 (DaijiworldNews/HR): ಈಶ್ವರಪ್ಪ ಹರಕುಬಾಯಿ ದಾಸ, ಅದು ಬಚ್ಚಲು ಬಾಯಿ ಎಂದು ಕೆ.ಎಸ್.ಈಶ್ವರಪ್ಪ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತೆ ಕಿಡಿಕಾರಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ್ರೋಹವೆಸಗಿರುವ ಸಚಿವ ಈಶ್ವರಪ್ಪ ಪರ ಮಾತನಾಡುವುತ್ತಿರುವುದು ದುರಂತ. ಮುಖ್ಯಮಂತ್ರಿ ಬೊಮ್ಮಾಯಿ ಈಶ್ವರಪ್ಪ ಬೆನ್ನಿಗೆ ನಿಂತಿದ್ದಾರೆ. ಸಂವಿಧಾನವನ್ನೇ ಬುಡಮೇಲು ಮಾಡುವುದು ಇವರ ಗುಪ್ತಸೂಚಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಂಘಪರಿವಾರ ಬೆಳೆಸುತ್ತಿರುವುದು ಕೂಡ ಇಂತವರನ್ನೆ. ದೇಶದಲ್ಲಿ ಈಶ್ವರಪ್ಪನವರಂತ ಹರಕುಬಾಯಿ ದಾಸರಿದ್ದಾರೆ. ಇಂತವರಿಗೆಲ್ಲ ನಾನು ಉತ್ತರ ಕೊಡಲು ಆಗಲ್ಲ ಎಂದು ಹೇಳಿದ್ದಾರೆ.