ಮೈಸೂರು, ಫೆ 19 (DaijiworldNews/KP): ಜೀಪ್ ತೆಗೆದುಕೊಳ್ಳಲು ಸಹಕಾರ ಸಂಘದಿಂದ ಸಾಲ ಕೊಡಿಸಿ ಸಾಲದ ಕಂತು ಕಟ್ಟಲು ಹೇಳಿದ ತಾಯಿಯನ್ನು ಮಗ ಜೀಪ್ ಹರಿಸಿ ಕೊಂದಿರುವ ಘಟನೆ ಮೈಸೂರು ಜಿಲ್ಲೆ ಬೆಟ್ಟದಪುರ ಹೋಬಳಿಯ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ.
ನಾಗಮ್ಮ ಮೃತ ದುರ್ದೈವಿ ಹಾಗೂ ಆರೋಪಿಯನ್ನು ಹೇಮರಾಜ್ ಎಂದು ಗುರುತಿಸಲಾಗಿದೆ
ಮಗನಿಗೆ ಜೀಪ್ ತೆಗೆದುಕೊಳ್ಳಲು ಆಕೆ ಸಹಕಾರ ಸಂಘದಿಂದ 70 ಸಾವಿರ ಸಾಲ ಪಡೆದುಕೊಂಡಿದ್ದರು, ಆದರೆ ಸಾಲದ ಹಣ ವಾಪಸ್ ಮಾಡದೇ ಇದ್ದಾಗ ಸಂಘದ ಇತರ ಸದಸ್ಯರು ನಾಗಮ್ಮನನ್ನು ಒತ್ತಾಯಿಸಿದ್ದಾರೆ. ಇದರಿಂದ ತಾಯಿ ಮಗನ ಬಳಿ ಸಾಲದ ಹಣ ಕಟ್ಟುವಂತೆ ತಿಳಿಸಿದ್ದು, ಇದರಿಂದ ಕೋಪಗೊಂಡ ಹೇಮರಾಜ್ ಬೆಳಗ್ಗೆ ಆಕೆಯೊಂದಿಗೆ ವಾಗ್ದಾದ ನಡೆಸಿದ್ದಾನೆ.
ಆಕೆ ಸಂಘಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದಾಗ ಮಗ ತಾಯಿಯ ಮೇಲೆ ವಾಹನ ಚಲಾಯಿಸಿದ್ದಾನೆ. ಕೂಡಲೇ ಗ್ರಾಮಸ್ಥರು ನಾಗಮ್ಮನನ್ನು ಆಸ್ಪತ್ರಗೆ ಕರೆದುಕೊಂಡು ಹೋದರು ಪ್ರಯೋಜನವಾಗಲಿಲ್ಲ, ಅದಾಗಲೇ ಆಕೆ ಉಸಿರು ನಿಲ್ಲಿಸಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಇನ್ನು ಈ ಕುರಿತಂತೆ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.