ಉತ್ತರ ಪ್ರದೇಶ, ಫೆ 19 (DaijiworldNews/HR): ಮಣಿಪಾಲದ ರಶ್ಮಿ ಸಾಮಂತ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಚುನಾವಣೆ ಪ್ರಚಾರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಶ್ಮಿ ಅವರು ಲಂಡನ್ ಆಕ್ಸ್ಫರ್ಡ್ ವಿ.ವಿ. ವಿದ್ಯಾರ್ಥಿಯಾಗಿದ್ದ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದು ಬಳಿಕ ಹಿಂದು ಬಲಪಂಥೀಯವಾದಿ ಎಂಬ ಅಪ ಪ್ರಚಾರಕ್ಕೆ ಗುರಿಯಾಗಿ ರಾಜೀನಾಮೆ ನೀಡಿದ್ದು, ಈ ಬಗ್ಗೆ ದೇಶ ವ್ಯಾಪಿ ಚರ್ಚೆ ಕೂಡ ನಡೆದಿತ್ತು.
ಇನ್ನು ಮಣಿಪಾಲ ಎಂಐಟಿಯಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಇವರು ನವೆಂಬರ್ ತಿಂಗಳಲ್ಲಿ ಆಕ್ಸ್ ಫರ್ಡ್ ವಿ.ವಿ.ಯಿಂದ ವಿಶಿಷ್ಟ ಶ್ರೇಣಿಯಿಂದ ಎಂಎಸ್ಸಿ ಪದವಿ ಪಡೆದು ಭಾರತಕ್ಕೆ ವಾಪಸಾಗಿದ್ದರು.
ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚುನಾವಣೆ ನಿರ್ವಹಣೆ ಸಂಬಂಧಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.