ಬೆಂಗಳೂರು, ಫೆ 19 (DaijiworldNews/HR): ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆಸಿಕೊಳ್ಳೋದಕ್ಕೆ ಹೋದಅಭಿಮಾನಿಯೊಬ್ಬರ ಮೇಲೆ ನಟ ಧನ್ವೀರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದ್ದು, ನಟನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಫೆ.17ರಂದು ತಡ ರಾತ್ರಿ ನಟ ಧನ್ವೀರ್, ಬೆಂಗಳೂರಿನ ಎಸ್ ಸಿ ರಸ್ತೆಯಲ್ಲಿನ ಅನುಪಮಾ ಥಿಯೇಟರ್ ಗೆ ಬೈ ಟೂ ಲವ್ ಸಿನಿಮಾ ರಿಲೀಸ್ ಸಂಬಂಧ ತೆರಳಿದ್ದು, ಅಭಿಮಾನಿ ಚಂದ್ರಶೇಖರ್ ಎಂಬುವರು ನಟ ಧನ್ವೀರ್ ನೋಡಿದ್ದಾರೆ. ಕೂಡಲೇ ಅವರ ಬಳಿಗೆ ತೆರಳಿ ಒಂದು ಸೆಲ್ಫಿ ತೆಗೆಸಿಕೊಳ್ಳೋದಕ್ಕೆ ಬೇಡಿಕೆ ಇಟ್ಟಿದ್ದು, ಆದ್ರೇ ಧನ್ವೀರ್ ಮಾತ್ರ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ.
ಇನ್ನು ಈ ವೇಳೆ ನಟ ಧನ್ವೀರ್ ಹಾಗೂ ಆತನ ಜೊತೆಗಿದ್ದಂತ ಬೌನ್ಸರ್ ಗಳು ಸೇರಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ.
ಹಲ್ಲೆಗೊಳಗಾದಂತ ಚಂದ್ರಶೇಖರ್ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ದೂರು ಆಧರಿಸಿ, ಈಗ ನಟ ಧನ್ವೀರ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.