ಬೆಂಗಳೂರು, ಫೆ 18 (DaijiworldNews/HR): ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಕೇಸರಿ ಶಾಲು ಮತ್ತು ಪೇಟವನ್ನು ಕೊಟ್ಟವರು ಯಾರೆಂದು ಕೂಡಲೇ ತನಿಖೆ ನಡೆಸಬೇಕು ಎಂದು ಯು.ಟಿ.ಖಾದರ್ ಗೃಹ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರರಿಗೆ ಮನವಿ ಮಾಡಿರುವ ಯು.ಟಿ.ಖಾದರ್, ಉಡುಪಿಯಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಹೇಗೆ ಪ್ರಾರಂಭವಾಯಿತು? ಇದರಿಂದೇ ಯಾರು ಇದ್ದಾರೆ ಎಂಬ ತನಿಖೆ ಮಾಡಬೇಕೆಂದು ಸ್ಥಳೀಯ ಶಾಸಕರ ಕೋರಿಕೆ ಮೇರೆಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನು ರಾಜ್ಯದ ಅನೇಕ ಕಾಲೇಜಿನಲ್ಲಿ ನಡೆದ ಸಮಸ್ಯೆಗೆ ಕಾರಣಕರ್ತರು ಯಾರು? ಮುಗ್ದ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿ ಶಾಲು ಮತ್ತು ಪೇಟವನ್ನು ಕೊಟ್ಟವರು ಯಾರೆಂದು ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.