ಕಲಬುರ್ಗಿ, ಫೆ 18 (DaijiworldNews/MS): ನಮ್ಮ ಮಕ್ಕಳ ಹಿಜಾಬ್ ಗೆ ಅಡ್ಡಿಪಡಿಸಿದವರನ್ನು ತುಂಡುತುಂಡು ಮಾಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕಲ್ಬುರ್ಗಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ನಾಯಕ ಮುಕ್ರಂ ಖಾನ್ ವಿರುದ್ಧ ಶುಕ್ರವಾರ ಎಫ್ಐಆರ್ ದಾಖಲಾಗಿದೆ.
ನೀವು ಯಾವ ಬಟ್ಟೆಯಾದರೂ ಧರಿಸಿ, ಆದರೆ ನಮ್ಮ ಹಿಜಾಬ್ ಗೆ ಯಾಕೆ ಅಡ್ಡಿ ? ಹಿಜಬ್ ತಂಟೆಗೆ ಬಂದರೆ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಆಂದೋಲಾ ಸ್ವಾಮಿಯನ್ನು ತುಂಡು, ತುಂಡು ಮಾಡಿ ಕತ್ತರಿಸುತ್ತೇನೆ ಎಂದು ಹೇಳಿದ್ದರು.
ಈ ಹೇಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದ ಹಿಂದೂಪರ ಸಂಘಟನೆಗಳು, ಮುಕ್ರಂ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರು.
ಇದೀಗ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಚೋದನಕಾರಿ ಭಾಷಣ, ಕೋಮು ಸೌಹಾರ್ದತೆ ಕದುಡುವ ನಿಟ್ಟಿನಲ್ಲಿ ಹೇಳಿಕೆ ನೀಡಿದ ಮುಕ್ರಂ ಖಾನ್ ವಿರುದ್ಧ ಐಪಿಸಿ ಸೆಕ್ಷನ್ (153), (295), (298) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.