ಚೆನ್ನೈ, ಫೆ 18 (DaijiworldNews/HR): ಫೆ. 19ರಂದು ನಡೆಯುವ ನಗರ ಸ್ಥಳೀಯ ಚುನಾವಣೆಗೆ ತಮಿಳುನಾಡು ಸಿದ್ದತೆ ಮಾಡಿಕೊಂಡಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿದ್ದು, ಇದೇ ಸಂದರ್ಭದಲ್ಲಿ ದುರಂತ ಘಟನೆಯೊಂದು ನಡೆದಿದೆ.
ಡಿಎಂಕೆ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿ.ಎಂ. ಅನುಸೂಯ ಎಂಬುವರು ಪ್ರಚಾರದ ಸಮಯದಲ್ಲಿ ಇದ್ದಕ್ಕಿದ್ದಂತೆ ಮೃತಪಟ್ಟಿದ್ದು, ಪಕ್ಷದ ನಾಯಕರಿಗೆ ಆಘಾತವಾಗಿದೆ.
ಗುರುವಾರದಂದು ತಂಜಾವೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದ ಅನುಸೂಯ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಇನ್ನು ತಮಿಳುನಾಡಿನಲ್ಲಿ ಫೆ. 19ಕ್ಕೆ ನಗರ ಸ್ಥಳೀಯ ಚುನಾವಣೆ ನಡೆಯಲಿದ್ದು, ಫೆ. 22ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.