ಬೆಂಗಳೂರು, ಫೆ 17 (DaijiworldNews/KP): ಕೆಲ ದಿನಗಳಿಂದ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಹಿಜಾಬ್ ವಿವಾದ ಇಂದೂ ಇತ್ಯರ್ಥವಾಗಿಲ್ಲ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ವಕೀಲರು ತಮ್ಮ ವಾದ ಮಂಡಿಸುತ್ತಿದ್ದಾರೆ, ವಿಚಾರಣೆ ಇನ್ನೂ ಮುಗಿಯದ ಕಾರಣ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ.
ಹಿಜಾಬ್ ವಿಚಾರವಾಗಿ ವೈಯಕ್ತಕ ಅರ್ಜಿ ಸಲ್ಲಿಸಿದ್ದ ವಿನೋದ್ ಕುಲಕರ್ಣಿ, ಸಾರ್ವಜನಿಕರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ. ಹಿಜಾಬ್ ವಿಚಾರದಿಂದ ಮುಸ್ಲಿಂ ವಿದ್ಯಾರ್ಥಿನಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತಿದ್ದು, ಈ ನಿಟ್ಟಿನಲ್ಲಿ ನಾನು ಕೈ ಮುಗಿದು ಕೇಳಿಕೊಳ್ಳುತ್ತೇನೆ ಶುಕ್ರವಾರ ಮತ್ತು ರಂಜಾನ್ ವೇಳೆಯಲ್ಲದರೂ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಇನ್ನು ನಾನೊಬ್ಬ ಸಂಪ್ರಾದಯಕ ಬ್ರಾಹ್ಮಣನಾಗಿ ಹೇಳುತ್ತಿದ್ದೇನೆ ಹಿಜಾಬ್ ಅನ್ನು ಬ್ಯಾನ್ ಮಾಡಿದರೆ ಕುರಾನ್ ಅನ್ನೇ ಬ್ಯಾನ್ ಮಾಡಿದಂತೆ, ಅದಕ್ಕಾಗಿ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲೂ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಇದೆ ವೇಳೆ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿಸಿರುವರ ಪರ ವಕೀಲ ಎಂ.ಎ.ದಾರ್ ಕೂಡ ವಾದ ಮಂಡಿಸಿದ್ದು, ಆದರೆ ಮುಖ್ಯವಾದ ಅರ್ಜಿಗೆ ಅವಕಾಶ ಕಲ್ಪಿಸುವ ಸಿಟ್ಟಿನಲ್ಲಿ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಅರ್ಜಿದಾರದ ಪರವಾಗಿ ವಾದ ಮಂಡನೆಯಾಗಿದ್ದು, ರಾಜ್ಯ ಸರ್ಕಾರದ ಪರವಾಗಿ ನಾಳೆ ವಾದ ಮಂಡಿಸುವುದಾಗಿ ತಿಳಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ.
ಇನ್ನು ಅಡ್ವೊಕೇಟ್ ಜನರಲ್ ವಾದಿಸಿದ ಬಳಿಕ ಪ್ರತಿವಾದಿ ಕಾಲೇಜುಗಳ ಪರವಾಗಿ ವಾದಿಸುವುದಾಗಿ ತಿಳಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ ಹೇಳಿದ್ದಾರೆ.