ಪಾಟ್ನಾ, ಫೆ 17 (DaijiworldNews/KP): ಬಿಹಾರದ ಜನರು ಪಂಜಾಬ್ಗೆ ಎಷ್ಟು ಸೇವೆ ಸಲ್ಲಿಸಿದ್ದಾರೆ, ಆದರೂ ಸಿಎಂ ಚನ್ನಿ “ಭಯ್ಯಾಸ್” ಎಂಬ ಪದ ಬಳಕೆ ಮಾಡಿರುವುದು ಸರಿಯಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಿಡಿಕಾರಿದ್ದಾರೆ.
ಈ ಹಿಂದೆ ಪಂಜಾಬ್ನಲ್ಲಿ ಮಾತನಾಡಿದ ಚನ್ನಿ, ಉತ್ತರ ಪ್ರದೇಶ, ಬಿಹಾರ ಮತ್ತು ದೆಹಲಿಯ “ಭಯ್ಯಾಸ್” ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡಬೇಡಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಜನರು ಪಂಜಾಬ್ಗೆ ಎಷ್ಟು ಸೇವೆ ಸಲ್ಲಿಸಿದ್ದಾರೆಂದು ಅವರಿಗೆ ತಿಳಿದಿಲ್ಲವೇ, ಆದರೂ ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ಅವರ “ಭಯ್ಯಾಸ್” ಎಂಬ ಪದ ಬಳಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಇನ್ನು ಪಂಜಾಬ್ನಲ್ಲಿ ಬಿಹಾರದ ಎಷ್ಟು ಜನರು ವಾಸಿಸುತ್ತಿದ್ದಾರೆ ಮತ್ತು ಅವರು ಪಂಜಾಬ್ ನೆಲಕ್ಕಾಗಿ ಎಷ್ಟು ಸೇವೆ ಸಲ್ಲಿಸಿದ್ದಾರೆಂದು ಚನ್ನಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಇನ್ನು ಪ್ರಿಯಾಂಕಾ ಗಾಂಧಿ ಪಂಜಾಬ್ನ ಸೊಸೆ. ಇಲ್ಲಿ ಆಡಳಿತ ನಡೆಸಲು ಬಂದಿರುವ 'ಉತ್ತರ ಪ್ರದೇಶ, ಬಿಹಾರ, ದೆಹಲಿಯ ದೇ ಭಯ್ಯಾಸ್ಗಳನ್ನು ರಾಜ್ಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಆಪ್ ನಾಯಕರನ್ನು ಗುರಿಯಾಗಿಸಿಕೊಂಡು ಪಂಜಾಬ್ ಸಿಎಂ ಚನ್ನಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಪಂಜಾಬ್ ಪ್ರತಿಪಕ್ಷ ಗಳಾದ ಬಿಜೆಪಿ, ಅಕಾಲಿದಳ ಮತ್ತು ಎಎಪಿಯಿಂದ ತೀವ್ರವಾಗಿ ಟೀಕಿಸಿದ್ದಾರೆ.
ಅಲ್ಲದೆ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲಗಲಿ ವೈರಲ್ ಆಗಿದ್ದು, ಇನ್ನು ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಈ ಪದ “ತುಂಬಾ ನಾಚಿಕೆಗೇಡಿನದು” ಎಂದು ಹೇಳಿದ್ದಾರೆ.