ಬೆಂಗಳೂರು, ಫೆ 17 (DaijiworldNews/KP): ಈಗಿನ ಕಾಂಗ್ರೆಸ್ ನಾಯಕರಿಗೆ ನಕಲಿ, ಅವರಿಗೆ ನೈತಿಕತೆ ಇಲ್ಲ. ಅಂತಹವರನ್ನು ವಜಾ ಮಾಡಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದರು.
ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ನವರು ಸದನದಲ್ಲಿ ಒತ್ತಾಯಿಸಿದ್ದು, ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಈಗಿನ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ ಅಂತಹವರನ್ನು ವಜಾ ಮಾಡಬೇಕು ಎಂದು ಕಿಡಿಕಾರಿದರು.
ಇನ್ನು ನಮ್ಮ ಬಿಜೆಪಿ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ಉಗ್ರರ ಸವಾಲು ಮೆಟ್ಟಿ ರಾಷ್ಟ್ರಧ್ವಜ ಹಾರಿಸಿದೆ. ಆದರೆ ಕಾಂಗ್ರೆಸ್ ಮತಕ್ಕಾಗಿ ಅಲ್ಪ ಸಂಖ್ಯಾತರ ಓಲೈಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಿದರು.
ಅಲ್ಲದೆ ಕಾಂಗ್ರೆಸ್ ನವರು ಧರಣಿ ಮಾಡಲಿ. ನಿದ್ದೆ ಮಾಡಲಿ. ಇದೆಲ್ಲಾ ನಾಟಕ, ಶೋ ಅಂತಾ ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿನ್ನೆ ಸದನದಲ್ಲಿ ಕಾಂಗ್ರೆಸ್ನವರು ಗೂಂಡಾಗಿರಿ ಮಾಡಿದ್ದಾರೆ, ಆದರ ಬದಲು ಕಾಂಗ್ರೆಸ್ ನವರು ಸದನದಲ್ಲಿ ನಿದ್ದೆ ಮಾಡಲಿ, ಅದಕ್ಕಾಗಿ ಸರ್ಕಾರ ಎಲ್ಲ ವ್ಯವಸ್ಥೆ ಮಾಡುತ್ತೆ ಎಂದು ಹೇಳಿದರು.