ಫಿರೋಜ್ಪುರ, ಫೆ 17 (DaijiworldNews/KP): ಭಾರತಕ್ಕೆ ಸ್ವಾತಂತ್ರ್ಯ ಸಿಗುವ ವೇಳೆ ನರೇಂದ್ರ ಮೋದಿ ಏನಾದರೂ ಪ್ರಧಾನಿಯಾಗಿರುತ್ತಿದ್ದರೆ ಕರ್ತಾರ್ ಪುರದ ಸಾಹಿಬ್ ಮತ್ತು ನಾನ್ಕಾನ ಸಾಹಿಬ್ ಪಾಕಿಸ್ತಾನದ ಪಾಲಾಗುತ್ತಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಫಿರೋಜ್ಪುರದ ಚುನಾವಣಾ ರ್ಯಾಲಿಯಲ್ಲಿ ಮೋದಿಯ ಮಾತನ್ನು ಉಲ್ಲೇಖಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಸಿಗುವ ವೇಳೆ ನರೇಂದ್ರ ಮೋದಿ ಏನಾದರೂ ಪ್ರಧಾನಿಯಾಗಿರುದ್ದರೆ ಕರ್ತಾರ್ ಪುರದ ಸಾಹಿಬ್ ಮತ್ತು ನಾನ್ಕಾನ ಸಾಹಿಬ್ ಭಾರತದಲ್ಲೇ ಇರುತ್ತಿತ್ತು ಎಂದು ಹೇಳಿದ್ದಾರೆ.
ಇನ್ನು 4-ಕಿಮೀ ಉದ್ದದ ಕರ್ತಾರ್ಪುರ ಕಾರಿಡಾರ್ ಮೂಲಕ ಭಾರತೀಯ ಸಿಖ್ ಯಾತ್ರಾರ್ಥಿಗಳು ವೀಸಾ ಇಲ್ಲದೇ ಗುರುದ್ವಾರ ದರ್ಬಾರ್ ಸಾಹೀಬ್ಗೆ ಭೇಟಿ ನೀಡಬಹುದು, ಅಲ್ಲದೆ ಈ ಕಾರಿಡಾರ್ ಅನ್ನು 2019ರಲ್ಲಿ ಮೋದಿ ಉದ್ಘಾಟಿಸಿದ್ದರು ಎಂದು ಹೇಳಿದ್ದಾರೆ.
ಅಲ್ಲದೆ ಕರ್ತಾರ್ಪುರ ಸಾಹಿಬ್ನಲ್ಲಿ ಕಾರಿಡಾರ್ ತೆರೆಯಬೇಕೆಂಬ ಸಿಖ್ಖರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದೇ ಮೋದಿಯವರು, ಇವರು 1947ರಲ್ಲಿ ಪ್ರಧಾನಿಯಾಗಿರುತಿದ್ದರೆ ಭಾರತದಿಂದ ಕರ್ತಾರ್ ಪುರದ ಸಾಹಿಬ್ ಮತ್ತು ನಾನ್ಕಾನ ಸಾಹಿಬ್ ಪಾಕಿಸ್ತಾನದ ಪಾಲಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಬುಧವಾರ ಪಠಾಣ್ಕೋಟ್ನಲ್ಲಿ ಚುನಾವಣಾ ರ್ಯಾಲಿಯ ವೇಳೆ ಮಾತನಾಡಿದ ಮೋದಿ, ಭಾರತ ವಿಭಜನೆಯ ಸಮಯದಲ್ಲಿ ಕರ್ತಾರ್ಪುರ ಸಾಹಿಬ್ ಅನ್ನು ಭಾರತದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದ್ದು, ಇದೇ ಅವರು ಮಾಡಿದ ಮೊದಲ 'ಪಾಪ' ಎಂದು ಹೇಳಿದ್ದರು.