ಕಲ್ಬುರ್ಗಿ, ಫೆ 17 (DaijiworldNews/MS): ನಮ್ಮ ಮಕ್ಕಳ ಹಿಜಾಬ್ ಗೆ ಅಡ್ಡಿಪಡಿಸಿದರೆ ತುಂಡುತುಂಡು ಮಾಡುತ್ತೇವೆ ಎಂದು ಕಲ್ಬುರ್ಗಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಕ್ರಂಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನೀವು ಯಾವ ಬಟ್ಟೆಯಾದರೂ ಧರಿಸಿ, ಆದರೆ ನಮ್ಮ ಹಿಜಾಬ್ ಗೆ ಯಾಕೆ ಅಡ್ಡಿ ?ನಮ್ಮ ಮಕ್ಕಳಿಗೆ ಹಿಜಾಬ್ ಗೆ ಅಡ್ಡಿಪಡಿಸಿದರೆ ತುಂಡುತುಂಡು ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಅವರ ಈ ವಿವಾದಾತ್ಮಕ ಹೇಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಕಲ್ಬುರ್ಗಿ ಜಿಲ್ಲೆಯ ಸೇಡಂ ಪೊಲೀಸ್ ಠಾಣೆ ಎದುರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮುಕ್ರಂಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಈ ಸಂಬಂಧ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ವಿಹೆಚ್ಪಿ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಿರೋ ಮುಕ್ರಂ ಖಾನ್ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ದ್ವೇಷ ಬಿತ್ತುವ ಹೇಳಿಕೆಯನ್ನು ನೀಡಿದವರನ್ನು ಸುಮ್ಮನೆ ಬಿಡಬಾರದು. ನಮಗೂ ಮಾತನಾಡಲಿಕ್ಕೆ ಬರುತ್ತದೆ. ಆದ್ರೆ ನಮ್ಮ ಮಾತುಗಳು ಅಶಾಂತಿಗೆ ಕಾರಣವಾಗಬಾರದು ಅಂತ ಸುಮ್ಮನಿದ್ದೇವೆ ಎಂದಿದ್ದಾರೆ.