ಗುಜರಾತ್, ಫೆ 16 (DaijiworldNews/KP): ಹಾಡಹಗಲೇ 21 ವರ್ಷದ ಯುವತಿಯನ್ನು ಕೊಲೆ ಮಾಡಿದ ಘಟನೆ ಗುಜರಾತ್ನ ಸೂರತ್ನ ಕಮ್ರೇಜ್ ಬಳಿಯ ಪಸೋದರ ಎಂಬಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಆರೋಪಿಯನ್ನು ಫೆನಿಲ್ ಎಂದು ಗುರುತಿಸಲಾಗಿದ್ದು, ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಫೆನಿಲ್ ಯುವತಿಯ ಎದುರು ತನ್ನ ಪ್ರೇಮ ನಿವೇದನೆ ಮಾಡಿದ್ದು, ಈ ವೇಳೆ ಆತನ ಪ್ರೀತಿಯನ್ನು ನಿರಕಾರಿಸಿದ್ಧಾಳೆ ಇದರಿಂದ ಕೋಪಗೊಂಡ ಆತ ಆಕೆಯನ್ನು ಕೊಂದು ತಾನು ಆತ್ಮಹತ್ಯೆ ಮಾಡಲು ಮುಂದಾಗಿದ್ದಾನೆ ಎಂದು ಮಾಹಿತಿ ದೊರಕಿದೆ.
ಫೆನಿಲ್ ಯುವತಿಯನ್ನು ಕೊಲ್ಲಲು ಯತ್ನಿಸಿದಾಗ ಜನರು ಅವನನ್ನು ತಡೆಯಲು ಪ್ರಯತ್ನಿಸಿದ್ದಾದರೂ ಅವನು ಯಾರ ಮಾತನ್ನೂ ಕೇಳದೇ ಯುವತಿಯ ಕತ್ತು ಸೀಳಿದ್ದು, ಇದೇ ವೇಳೆ ಯುವತಿಯನ್ನು ರಕ್ಷಿಸಲು ಬಂದ ಆಕೆಯ ಸಹೋದರನಿಗೂ ಆರೋಪಿ ಚಾಕುವಿನಿಂದ ಇರಿದಿದ್ದಾನೆ.
ಯುವತಿಯನ್ನು ಕೊಂದ ನಂತರ ಆರೋಪಿ ತಾನು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಬಳಿಕ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಫೆನಿಲ್ನನ್ನು ಕಾಮ್ರೇಜ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸದ್ಯ ಈ ಘಟನೆ ನಗರವನ್ನೇ ಬೆಚ್ಚಿಬೀಳಿಸಿದ್ದು, ಆರೋಪಿ ಫೆನಿಲ್ನನ್ನು ಗಲ್ಲಿಗೇರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.