ಬೆಂಗಳೂರು, ಫೆ 16 (DaijiworldNews/KP): ಪದವಿ ಕಾಲೇಜುಗಳಿಗೆ ಹಿಜಾಬ್ ಧರಿದಂತೆ ಯಾವುದೇ ನಿರ್ಬಂಧ ವಿದಿಸಿಲ್ಲ ಎಂದು ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಹೇಳಿದರು.
ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದವಿ ಕಾಲೇಜುಗಳಿಗೆ ಹಿಜಾಬ್ ಧರಿದಂತೆ ಯಾವುದೇ ನಿರ್ಬಂಧ ವಿದಿಸಿಲ್ಲ ಎಂದು ಸಚಿವ ಅಶ್ವಥ ನಾರಾಯಣ ಹೇಳಿದ್ದು, ಈ ಕುರಿತಂತೆ ಸಿಎಂ ಬೊಮ್ಮಾಯಿ ಕೂಡ ಸ್ಪಷ್ಟನೆ ನೀಡಿದ್ದಾರೆ ಎಂದು ಈ ವೇಳೆ ಹೇಳಿದರು.
ಈಗಾಗಲೇ ಡಿಗ್ರಿ ಕಾಲೇಜುಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದ್ದಾರೆ, ಈ ಕುರಿತು ಡಿಗ್ರಿ ಕಾಲೇಜುಗಳು, ವಿವಿಗಳು ಗೊಂದಲ ಸೃಷ್ಟಿಸಿಕೊಳ್ಳುವುದು ಬೇಡ, ಗೊಂದಲವಿದ್ದಲ್ಲಿ ನೇರವಾಗಿ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಲಿ ಎಂದು ಅವರು ಹೇಳಿದರು.
ಇವತ್ತಿನಿಂದ ಪದವಿ ಕಾಲೇಜುಗಳು ಪ್ರಾರಂಭವಾಗಿದ್ದು, ಸಮವಸ್ತ್ರ ನಿಯಮ ಇರುವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಕೋರ್ಟ್ ಆದೇಶದಂತೆ ಉಡುಪು ಧರಿಸಿ ಕಾಲೇಜುಗಳಿಗೆ ಬರಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದರು.