ಕೇರಳ, ಫೆ 14 (DaijiworldNews/KP): ಕೇರಳದ ಕೋಯಿಕ್ಕೋಡ್ನ ಜಿಲ್ಲೆಯ ಮಮ್ಮಿಕ್ಕಾ(60) ಎಂಬ ಕೂಲಿ ಕಾರ್ಮಿಕರೊಬ್ಬರು ತಮ್ಮ ಸೈಲಿಶ್ ಲುಕ್ನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದಾರೆ.
ಕೇರಳದ ಶರೀಕ್ ವಯಾಲಿಲ್ ಎಂಬ ಖ್ಯಾತ ಛಾಯಾಗ್ರಾಹಕನೊಬ್ಬನ ಕ್ಯಾಮರಗೆ ಮಮ್ಮಿಕ್ಕಾ ಅವರು ತಮ್ಮ ಲುಂಗಿ ಮತ್ತು ಶರ್ಟ್ ಅನ್ನು ಬದಿಗಿಟ್ಟು ಸೂಟ್ ಮತ್ತು ಸನ್ ಗ್ಲಾಸ್ ಹಾಕಿ ಐಪ್ಯಾಡ್ನೊಂದಿಗೆ ಪೋಸ್ ನೀಡಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಫೋಟೋಗ್ರಾಫರ್ನ ಕೈಚಳಕವನ್ನು ಎಂದು ಕೊಂಡಾಡಿದ್ದಾರೆ.
ಇದೀಗ ಅಲ್ಲಿ ಮಮ್ಮಿಕ್ಕಾ ಅವರನ್ನು ಭೇಟಿ ಮಾಡಿ ಅವರ ಫೋಟೋವನ್ನು ತೆಗೆದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಫೋಟೋವು ಖ್ಯಾತ ನಟ ವಿನಾಯಕನ್ ಅವರನ್ನು ಹೋಲುವಂತೆ ಇತ್ತು ಎಂಬ ಕಾರಣಕ್ಕೆ ಸಾಕಷ್ಟು ವೈರಲ್ ಆಗಿತ್ತು.
ಈ ಘಟನೆಯಾಗಿ ಕೆಲದಿನಗಳ ಬಳಿಕ ಶರೀಕ್ ಅವರ ಮಾಲೀಕತ್ವದ ವೆಡ್ಡಿಂಗ್ ಸೂಟ್ ಕಂಪೆನಿಯ ಪ್ರಚಾರಕ್ಕಾಗಿ ಮಾಡೆಲ್ ಆಗಿ ಮಮ್ಮಿಕ್ಕಾ ಅವರನ್ನು ಆಯ್ಕೆ ಮಾಡಿದ್ದಾರೆ.
ಇತ್ತೀಚೆಗೆ ಸ್ಥಳೀಯ ಸಂಸ್ಥೆಯೊಂದರ ಪ್ರಚಾರದ ಫೋಟೋ ಶೂಟ್ಗಾಗಿ ಮಮ್ಮಿಕ್ಕಾ ಅವರು ತಮ್ಮ ಲುಂಗಿ ಮತ್ತು ಶರ್ಟ್ ಅನ್ನು ಬದಿಗಿಟ್ಟು ಸೂಟ್ ಮತ್ತು ಸನ್ಗ್ಲಾಸ್ ಹಾಕಿ ಐಪ್ಯಾಡ್ನೊಂದಿಗೆ ಪೋಸ್ ಕೊಟ್ಟಿದ್ದು, ಕಳೆದ ವಾರ ಈ ಫೋಟೋವನ್ನು ಶರೀಕ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದುವರೆಗೂ 23,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿ ಬೆಂಕಿ ಎಮೋಜಿಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ತನ್ನ ಕಂಪೆನಿಗೆ ಮಮ್ಮಿಕ್ಕಾಗಿಂತ ಉತ್ತಮವಾದ ಮಾಡೆಲ್ ಅನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಶರೀಕ್ ಹೇಳಿದ್ದಾರೆ.