ಮುಂಬೈ, ಫೆ 15 (DaijiworldNews/HR): ಮುಂಬೈನ ರೈಲ್ವೆ ಕ್ರಾಸಿಂಗ್ ಬಳಿ ಬೈಕ್ಗೆ ರೈಲು ಢಿಕ್ಕಿಯಾಗಿ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿ ಸವಾರರಿಬ್ಬರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.
ರೈಲ್ವೆ ಗೇಟ್ಗಳಿಲ್ಲದ ರೈಲ್ವೆ ಕ್ರಾಸಿಂಗ್ ಇದಾಗಿದ್ದು, ಮುನ್ನೆಚರಿಕೆ ಇದ್ದರೂ ಇವರಿಬ್ಬರು ತಮ್ಮ ಬೇರೆ ಬೇರೆ ಬೈಕ್ ನಲ್ಲಿ ರೈಲ್ವೆ ಗೇಟ್ ದಾಟಲು ಪ್ರಯತ್ನಿದ್ದು, ಸದ್ಯ ಕೂದಲೆಳೆ ಅಂತರದಲ್ಲಿ ಪಾರಾಗಿ ಬದುಕುಳಿದಿದ್ದಾರೆ.
ಇನ್ನು ವೀಡಿಯೊದಲ್ಲಿ ಸವಾರನು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ರೈಲ್ವೆ ಹಳಿ ದಾಟುತ್ತಿರುವುದನ್ನು ಕಾಣಬಹುದು. ಆದರೆ ಬೈಕ್ನ ಟೈರ್ ಟ್ರ್ಯಾಕ್ನಲ್ಲಿ ಸಿಲುಕಿಕೊಂಡಿದ್ದು, ತಕ್ಷಣ ಈತ ಬೈಕ್ ಬಿಟ್ಟು ಹಿಂದೆ ಸರಿದಿದ್ದು, ಇದೇ ಕ್ಷಣಕ್ಕೆ ವೇಗವಾದ ರೈಲೊಂದು ಆ ಟ್ರ್ಯಾಕ್ನಲ್ಲಿ ಪಾಸಾಗಿದೆ ಎನ್ನಲಾಗಿದೆ.