ನವದೆಹಲಿ, ಫೆ 15 (DaijiworldNews/HR): ಉಕ್ರೇನ್ ಮತ್ತು ರಷ್ಯಾ ದೇಶಗಳ ನಡುವೆ ಯುದ್ಧ ಭೀತಿ ಹಿನ್ನೆಲೆಯಲ್ಲಿ ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಉಕ್ರೇನ್ ರಷ್ಯಾ ನಡುವೆ ಯುದ್ಧ ಭೀತಿ ಹಿನ್ನೆಲೆಯಲ್ಲಿ ಉಕ್ರೇನ್ ನಲ್ಲಿರುವ ಭಾರತೀಯರು ಉಕ್ರೇನ್ ತೊರೆಯುವಂತೆ ಕೇಂದ್ರಸರ್ಕಾರ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಈಗಾಗಲೇ ಅಮೇರಿಕಾ ಕೂಡ ಉಕ್ರೇನ್ ನಲ್ಲಿರುವ ಅಮೇರಿಕಾನ್ನರು ಉಕ್ರೇನ್ ತೊರೆಯುವಂತೆ ಸಂದೇಶ ರವಾನಿಸಿದ್ದು, ಇದರ ಬೆನ್ನಲ್ಲೇ ಭಾರತವೂ ಸಹ ಉಕ್ರೇನ್ ನಲ್ಲಿರುವ ಭಾರತೀಯರು ಉಕ್ರೇನ್ ತೊರೆಯುಂತೆ ಸೂಚನೆ ನೀಡಿದೆ ಎನ್ನಲಾಗಿದೆ.