ಶಿವಮೊಗ್ಗ, ಫೆ 15 (DaijiworldNews/HR): ಶಿವಮೊಗ್ಗದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದ್ದು, ನಿನ್ನೆ 13 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಬರೆಯದೇ ವಾಪಾಸ್ ಆಗಿದ್ದು, ಇಂದು ಮತ್ತಿಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಾಸ್ ಆಗಿದ್ದಾರೆ.
ನಾವು ಪರೀಕ್ಷೆ ಬರೆಯದಿದ್ದರೂ ಬರೆಯದೇ ಇದ್ದರೂ ಪರವಾಗಿಲ್ಲ. ಹಿಜಾಬ್ ತೆಗೆಯೋದಿಲ್ಲ ಎಂದು ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯ13 ವಿದ್ಯಾರ್ಥಿನಿಯರು ನಿನ್ನೆ ಪರೀಕ್ಷೆ ಬಹಿಷ್ಕರಿಸಿ, ಶಾಲೆಯಿಂದ ಮನೆಗೆ ವಾಪಾಸ್ ಆಗಿದ್ದರು. ಈ ಬಳಿಕ ಇಂದೂ ಪರೀಕ್ಷೆ ಬಹಿಷ್ಕರಿಸಿದ ಇಬ್ಬರು ವಿದ್ಯಾರ್ಥಿನಿಯರು, ಮನೆಗೆ ವಾಪಾಸ್ ಆಗಿದ್ದಾರೆ.
ಇನ್ನು ನಮ್ಮ ಮನೆಯಲ್ಲಿ ಹಿಜಾಬ್ ಧರಿಸಿಯೇ ಶಾಲೆಗೆ ಹೋಗುವಂತೆ ತಿಳಿಸಿದ್ದಾರೆ. ಎಕ್ಸಾಂಗೆ ಕೂರಿಸದೇ ಇದ್ದರೂ ಪರವಾಗಿಲ್ಲ, ಮನೆಗೆ ಹೋಗುತ್ತೇವೆ ಎಂಬುದಾಗಿ ಹೇಳು ಎಂದಿರುವುದಾಗಿ ವಿದ್ಯಾರ್ಥಿನಿಯರು ಹೇಳಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.