ತಿರುವನಂತಪುರಂ, ಫೆ 14 (DaijiworldNews/KP): ಕೇರಳದ ತಿರುವನಂತಪುರಂನಲ್ಲಿ ತೃತೀಯ ಲಿಂಗಿಗಳಾದ ಮನು ಕಾರ್ತಿಕಾ ಮತ್ತು ಶ್ಯಾಮ ಎಸ್.ಪ್ರಭಾ ಅವರು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾವು ಪ್ರೇಮಿಗಳ ದಿನದಂದು ಮದುಮೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ, ಇನ್ನು ನಮ್ಮ ವಿವಾಹವನ್ನು ಟ್ರಾನ್ಸ್ ಜೆಂಡರ್ ಗುರುತಿನಡಿಯಲ್ಲಿ ನೊಂದಾಯಿಸಲು ಕೇರಳ ಹೈಕೋರ್ಟ್ಗೆ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಮನು ಕಾರ್ತಿಕಾ ಹೇಳಿದ್ದಾರೆ.
ತಮ್ಮ ಕುಟುಂಬದವರ ಅಶೀರ್ವಾದದೊಂದಿಗೆ ಹಿಂದೂ ಸಂಪ್ರದಾಯದಂತೆ ಪ್ರೇಮಿಗಳ ದಿನದಂದು ಕೇರಳದ ತಿರುವನಂತಪುರಂನಲ್ಲಿ ಮದುವೆಯಾಗಿದ್ದಾರೆ.
ತೃತೀಯಲಿಂಗಿ ದಂಪತಿಗಳು ವಿವಾಹ ಕಾಯ್ದೆಯಡಿ ತಮ್ಮ ಐಡಿ ಕಾರ್ಡ್ನಲ್ಲಿ ಪುರುಷ ಮತ್ತು ಮಹಿಳೆ ಎಂದು ನೋಂದಾಯಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು, ಆದರೆ ಅವರ ಐಡಿಯಲ್ಲಿ ಟ್ರಾನ್ಸ್ ಜೆಂಡರ್ ಎಂದು ಗುರುತಿಸಿದ್ದರಿಂದ ವಿವಾಹ ಕಾಯ್ದೆಯಲ್ಲಿ ನೋಂದಾಯಿಸಲು ಸಾಧ್ಯವಾಗಲಿಲ್ಲ, ಈ ನಿಟ್ಟಿನಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ.
ಇನ್ನು ತ್ರಿಶೂರ್ ಮೂಲದ ವರ ಮನು ಟೆಕ್ನೋ ಪಾರ್ಕ್ನ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ತಿರುವನಂತಪುರಂ ಮೂಲದ ಶ್ಯಾಮ ಕೇರಳದ ಸಾಮಾಜಿಕ ನ್ಯಾಯ ಇಲಾಖೆಯಲ್ಲಿ ಟ್ರಾನ್ಸ್ ಜೆಂಡರ್ ಸೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ.