ಡೆಹ್ರಾಡೂನ್, ಫೆ 15 (DaijiworldNews/HR): ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ವಿರುದ್ಧ ಲಕ್ಸರ್ನ ಬಿಜೆಪಿ ಶಾಸಕ ಸಂಜಯ್ ಗುಪ್ತಾ ಗಂಭೀರ ಆರೋಪ ಮಾಡಿದ್ದಾರೆ.
ಮದನ್ ಕೌಶಿಕ್ ಅವರು ವಿಧಾನಸಭಾ ಚುನಾವಣೆಯಲ್ಲಿ ಹಲವು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಶ್ರಮಿಸಿದ್ದು, ಅವರು ನನ್ನ ವಿರುದ್ಧ ಬಿಎಸ್ಪಿ ಅಭ್ಯರ್ಥಿಯನ್ನು ಬೆಂಬಲಿಸಿದರು. ಅವನೊಬ್ಬ ದೇಶದ್ರೋಹಿ. ಬಿಜೆಪಿ ನಾಯಕತ್ವವು ಮದನ್ ಕೌಶಿಕ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಎಂದು ಸಂಜಯ್ ಗುಪ್ತಾ ಒತ್ತಾಯಿಸಿದ್ದಾರೆ.
ಇನ್ನು ಉತ್ತರಾಖಂಡದ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆದಿದ್ದು, ಇದರ ಬೆನ್ನಲ್ಲೇ ಶಾಸಕ ಸಂಜಯ್ ಗುಪ್ತಾ ಅವರು ಮದನ್ ಕೌಶಿಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ
ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಶೇ.65.1ರಷ್ಟು ಮತದಾನ ದಾಖಲಾಗಿದ್ದು, ಉತ್ತರಾಖಂಡದಲ್ಲಿ ಹರಿದ್ವಾರದಲ್ಲಿ ಅತಿ ಹೆಚ್ಚು ಶೇ.68.37 ರಷ್ಟು ಮತ್ತು ಅಲ್ಮೋರಾ ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.50.65 ರಷ್ಟು ಮತದಾನವಾಗಿದೆ.