ಪಟ್ನಾ, ಫೆ 14 (DaijiworldNews/KP): ಪ್ರತಿ ಧರ್ಮದಲ್ಲಿ ಆವರದ್ದೇ ಆದ ಆರಾಧನೆ, ಆಚರಣೆ ಇರುತ್ತದೆ ಅದಕ್ಕೆ ನಾವು ಗೌರವಿಸುತ್ತೇವೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.
ಹಿಜಾಬ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಹಾರದ ಶಾಲೆಗಳಲ್ಲಿ ಮಕ್ಕಳು ಒಂದೇ ರೀತಿಯ ಬಟ್ಟೆ ಧರಿಸುತ್ತಾರೆ, ಹಾಗಿದ್ದರೂ ನಾವು ಪರಸ್ಪರರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಯಾರಾದರೂ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡರೆ, ಹಣೆಯ ಮೇಲೆ ಶ್ರೀಗಂಧದ ಬೊಟ್ಟು ಇಟ್ಟುಕೊಂಡರೆ ಅದು ವಿವಾದಾತ್ಮಕ ವಿಷಯವಾಗುವುದಿಲ್ಲ ಎಂದು ನಾನು ನಂಬುತ್ತೇನೆ. ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಅವರು ಬಯಸಿದ್ದನ್ನು ಧರಿಸುವ ಹಕ್ಕಿದೆ ಎಂದು ಹೇಳಿದ್ದಾರೆ.
ಇನ್ನು ಧರ್ಮ ಅಥವಾ ಸಂಸ್ಕೃತಿಯ ಆಚರಣೆಯ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ, ಅಲ್ಲದೆ ಅಂತಹ ಯಾವ ವಿವಾದಗಳು ಇದುವರೆಗೂ ಬಿಹಾರದಲ್ಲಿ ಬಂದಿಲ್ಲ ಎಂದಿದ್ದಾರೆ.