ನವದೆಹಲಿ, ಫೆ.14 (DaijiworldNews/HR): ಏರ್ ಇಂಡಿಯಾದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕ (ಎಂಡಿ)ಯಾಗಿ ಟರ್ಕಿಶ್ ಏರ್ ಲೈನ್ಸ್ನ ಮಾಜಿ ಅಧ್ಯಕ್ಷ ಇಲ್ಕರ್ ಐಸಿ ಅವರನ್ನ ನೇಮಿಸಲಾಗಿದೆ ಎಂದು ಟಾಟಾ ಗ್ರೂಪ್ ತಿಳಿಸಿದೆ.
ಇಲ್ಕರ್ ಐಸಿ ಅವರ ಉಮೇದುವಾರಿಕೆಯನ್ನ ಅನುಮೋದಿಸಲು ಏರ್ ಇಂಡಿಯಾ ಮಂಡಳಿಯು ಇಂದು ಸಭೆ ಸೇರಿದ್ದು, ಟಾಟಾ ಸನ್ಸ್ʼನ ಅಧ್ಯಕ್ಷ ಎನ್ ಚಂದ್ರಶೇಖರನ್ ಈ ಮಂಡಳಿಯ ಸಭೆಗೆ ವಿಶೇಷ ಆಹ್ವಾನಿತರಾಗಿದ್ದರು.
ಸಭೆ ಬಳಿಕ ಮಾತನಾಡಿದ ಎನ್ ಚಂದ್ರಶೇಖರನ್, ಇಲ್ಕರ್ ಐಸಿ ವಾಯುಯಾನ ಉದ್ಯಮದ ನಾಯಕರಾಗಿದ್ದು, ಅವರು ಟರ್ಕಿಶ್ ಏರ್ ಲೈನ್ಸ್ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಅದರ ಯಶಸ್ಸಿಗೆ ಮುನ್ನಡೆಸಿದರು. ಈಗ ಏರ್ ಇಂಡಿಯಾವನ್ನ ಹೊಸ ಯುಗಕ್ಕೆ ಮುನ್ನಡೆಸಲು ಟಾಟಾ ಗ್ರೂಪ್ ಇಲ್ಕರ್ ಅವರನ್ನು ಸಿಇಒ ಮತ್ತು ಎಂಡಿಯಾಗಿ ನೇಮಿಸಿದೆ ಎಂದರು.