ಲಕ್ನೋ, ಫೆ 14 (DaijiworldNews/KP): ನಾನು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಟೋಪಿ ತೆಗೆದು ತಿಲಕ ಇಡುವಂತೆ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ರಾಘವೇಂದ್ರ ಸಿಂಗ್ ಹೇಳಿದ್ದಾರೆ.
ರಾಜ್ಯದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಇದ್ದಾಗ ಹಿಂದೂಗಳು ಗೋಲ್ ಟೋಪಿಯನ್ನು ಧರಿಸುವಂತೆ ಒತ್ತಾಯ ಮಾಡಲಾಗಿತ್ತು, ಆದರೆ ನಾನು ಮತ್ತೆ ಶಾಸಕನಾದರೆ ಗೋಲ್ ಟೋಪಿಯನ್ನು ಇಲ್ಲವಾಗಿಸಿಸುತ್ತೇನೆ ಜೊತೆಗೆ ತಿಲಕ ಇಡುವಂತೆ ಮಡುತ್ತೇನೆ ಎಂದು ಹೇಳಿದ್ದಾರೆ.
ಇನ್ನು ನಾನು ಹಿಂದೂಗಳ ಹೆಮ್ಮೆಗಾಗಿ ಏನು ಬೇಕಾದರೂ ತ್ಯಾಗ ಮಾಡಲು ಸಿದ್ಧ. ಮುಸ್ಲಿಮರು ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ನಾನು ಮೌನವಾಗಿರುಲು ಹೇಗೆ ಸಾಧ್ಯ ಎಂದು ಸಿಂಗ್ ಹೇಳಿದ್ದಾರೆ.
ಅಲ್ಲದೆ ಇದೆ ಮೊದಲ ಬಾರಿಗೆ ಡೊಮರಿಯಾಗಂಜ್ ಕ್ಷೇತ್ರದಲ್ಲಿ ಬಹುಪಾಲು ಹಿಂದೂ ಅಭ್ಯರ್ಥಿಗಳೇ ಸ್ಪರ್ಧಿಸುತ್ತಿದ್ದು, ಡೊಮರಿಯಾಗಂಜ್ನಲ್ಲಿ ʼಸಲಾಮ್ʼ ಇದೆಯೇ ಅಥವಾ ʼಜೈ ಶ್ರೀರಾಮ್ʼ ಇದೆಯೇ ಎಂದು ಕೇಳಿದ್ದಾರೆ. ಸದ್ಯ ಮುಸ್ಲಿಂ ವಿರುದ್ದದ ಭಾಷಣದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.