ಹಾಸನ, ಫೆ 14 (DaijiworldNews/KP): ಹಿಜಾಬ್ ಎಂಬ ಭಾವನಾತ್ಮಕ ವಿಚಾರದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿ ಅದನ್ನು ಮತಗಳನ್ನಾಗಿ ಪರಿವರ್ತನೆ ಮಾಡವ ದುರಾಲೋಚನೆಯಲ್ಲಿ ಕೆಲವರು ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ,ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಎಂಬ ಭಾವನಾತ್ಮಕ ವಿಚಾರವನ್ನು ಮತಗಳನ್ನಾಗಿ ಪರಿವರ್ತನೆ ಮಾಡವ ದುರಾಲೋಚನೆಯಲ್ಲಿ ಕೆಲವರು ಇದ್ದಾರೆ. ಆದರೆ ಹಿಜಾಬ್ ವಿವಾದವು ಯಾವ ಕ್ಷಣದಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ತಿರಗುಬಾಣ ಆಗುಬಹುದು ಕಾದು ನೋಡೊಣ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷದ ಬೀಜ ಬಿತ್ತುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ, ಅಲ್ಲದೆ ಸಣ್ಣ ಪ್ರಮಾಣದಲ್ಲಿದ್ದ ಹಿಜಾಬ್ ವಿವಾದವನ್ನು ದೊಡ್ಡದು ವಿಷಾಯವನ್ನಾಗಿ ಕೆಲ ಸಂಘಟನೆಗಳು ಮಾಡಿದ್ದು, ಇವರೆಲ್ಲರ ಹಿಂದೆ ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರವೂ ಅಡಗಿದೆ ಎಂದು ಹೇಳಿದ್ದಾರೆ.
ಮಕ್ಕಳ ಮನಸನ್ನು ಹಾಳು ಮಾಡುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೂ ಹಿಜಾಬ್ ವಿಷಯವನ್ನು ತಂದಿರುವುದು ಸರಿಯೇ?, ಅಲ್ಲದೆ ಒಂದು ಶಾಲೆಯಲ್ಲಿ ಆರಂಭವಾದ ಈ ವಿವಾದವನ್ನು ಅಲ್ಲಿಯೇ ಮುಗಿಸಬೇಕಿತ್ತು, ಅದನ್ನು ಬಿಟ್ಟು ಕೆಲವರಿಗೆ ಬೇಕಾದ ರೀತಿಯಲ್ಲಿ ಬದಲಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗುವ ಹಾಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಮಕ್ಕಳನ್ನು ತಮ್ಮ ಲಾಭಕ್ಕಾಗಿ ಕೆಲ ಸಂಘಟನೆಗಳು ಬಹಸಿಕೊಳ್ಳುತ್ತಿದೆ, ಅಂತಹ ಸಂಘಟನೆಗಳ ವಿರುದ್ದ ಪೋಷಕರು ಎಚ್ಚರ ವಹಿಸಬೇಕು. ಅಲ್ಲದೆ ನೈಜ ವಾತಾವರಣ ಏನಿದೆ ಎಂಬ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಬೇಕು, ಚಿಕ್ಕ ಮಕ್ಕಳ ಮನಸ್ಸಿನಲ್ಲಿ ದ್ವೇಷದ ಮನೋಭಾವನೆ ಬೆಳೆಸುವಂಥ ಕೆಟ್ಟ ಕೆಲಸ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.