ಹುಬ್ಬಳ್ಳಿ, ಫೆ.14 (DaijiworldNews/HR): ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಭಾವಿಸಲಾಗಿದೆ. ನಾನು ಹಾಗೆ ಹೇಳಲೇ ಇಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸದೇ ಇದ್ದರೆ ರೇಪ್ ಆಗುತ್ತೆ ಎಂದು ನಾನು ಹೇಳಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಗೊಂದಲ ಸೃಷ್ಟಿ ಮಾಡಿದರೆ ನಾನೇನು ಮಾಡಲಿ? ಎಂದರು.
ಇನ್ನು ಹಿಜಾಬ್ ಧರಿಸುವುದರಿಂದ ಸಮಸ್ಯೆ ಏನು? ಸೇಫ್ಟಿಗಾಗಿ ಹಿಜಾಬ್ ಹಾಕುತ್ತಾರೆ ಎಂದು ನಾನು ಹೇಳಿದ್ದೆ ಆದರೆ ಅದನ್ನು ತಪ್ಪಾಗಿ ಅರ್ಥೈಸಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ.
ಈಗ ಸೇಫ್ಟಿಗಾಗಿ ಹೆಲ್ಮೆಟ್ ಧರಿಸುತ್ತಾರೆ. ಹೆಲ್ಮೆಟ್ಗೆ ಅವಕಾಶವಿದೆ. ಅದೇ ರೀತಿ ಸೇಫ್ಟಿಗಾಗಿ ಹಿಜಾಬ್ ಧರಿಸುತ್ತಾರೆ. ಅದರಲ್ಲಿ ತಪ್ಪೇನು? ವಿವಾದ ಹೈಕೋರ್ಟ್ನಲ್ಲಿದೆ. ಹೈಕೋರ್ಟ್ ಏನು ತೀರ್ಪು ನೀಡುತ್ತೋ ಅದಕ್ಕೆ ತಲೆಬಾಗುತ್ತೇವೆ ಎಂದು ಹೇಳಿದ್ದಾರೆ.