ಬೆಂಗಳೂರು, ಫೆ.14 (DaijiworldNews/HR): ಹಿಜಾಬ್, ಕೇಸರಿ ಶಾಲು ಪ್ರತಿಭಟನೆ ಸಂಧರ್ಭದಲ್ಲಿ ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಆಗಮಿಸುತ್ತೇನೆ, ಧೈರ್ಯವಿದ್ದರೆ ನನ್ನನ್ನು ತಡೆಯಲಿ ಎಂದಿದ್ದ ಶಾಸಕಿ ಖನೀಜ ಫಾತಿಮಾ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗವಹಿಸಿದ್ದಾರೆ.
ಕೆಲ ದಿನಗಳ ಹಿಂದೆ ಕಲಬುರ್ಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ಖನೀಜ ಫಾತಿಮಾ ನಾನು ಹಿಜಾಬ್ ಧರಿಸಿಯೇ ವಿಧಾನಸೌಧಕ್ಕೆ ಆಗಮಿಸುತ್ತೇನೆ, ಧೈರ್ಯವಿದ್ದರೆ ನನ್ನನ್ನು ತಡೆಯಲಿ ಎಂದು ಹೇಳಿದ್ದು, ಅದರಂತೆ ಇಂದು ಹಿಜಾಬ್ ಧರಿಸಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.
ಇನ್ನು ಖನೀಜ ಫಾತಿಮಾ ಹಾಕಿದ ಸವಾಲಿನಂತೆಯೇ ಇಂದು ಬುರ್ಕಾದ ಜೊತೆ ಹಿಜಾಬ್ ಧರಿಸಿದ್ದು, ಈ ಹಿಂದಿನ ಅಧಿವೇಶನಗಳಲ್ಲಿ ಶಾಸಕಿ ಖನಿಜ್ ಫಾತಿಮಾ ಹಿಜಾಬ್ ಧರಿಸಿದ್ದರು.