ಹುಬ್ಬಳ್ಳಿ, ಫೆ.14 (DaijiworldNews/HR): ಹಿಜಾಬ್ ಎಂದರೆ ಘೋಶಾ, ಪರ್ದಾ ಎಂಬ ಅರ್ಥ ಬರುತ್ತದೆ. ವಯಸ್ಸಿಗೆ ಬಂದ ಹುಡುಗಿಯರನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಹಿಜಾಬ್, ಬುರ್ಕಾ ಅಗತ್ಯ, ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಹೆಚ್ಚಾಗುತ್ತದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಎದುರಿಸಬೇಕಾಗುತ್ತದೆ. 'ಹಿಜಾಬ್ ಎಂದರೆ ಘೋಶಾ, ಪರ್ದಾ ಎಂಬ ಅರ್ಥ ಬರುತ್ತದೆ. ವಯಸ್ಸಿಗೆ ಬಂದ ಹುಡುಗಿಯರನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸಲು ಹಿಜಾಬ್, ಬುರ್ಕಾ ಅಗತ್ಯ, ಹಿಜಾಬ್ ಧರಿಸದಿದ್ದರೆ ರೇಪ್ ಹೆಚ್ಚಾಗುತ್ತದೆ, ಹಿಂದೂಸ್ತಾನದಲ್ಲೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳಿವೆ ಎಂಬ ವರದಿ ಬಂದಿರುವುದು ನಿಮಗೂ ಗೊತ್ತಿರಬಹುದು ಎಂದರು.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜಕೀಯ ಮುಖಂಡರು ನೀಡುತ್ತಿರುವ ಒಂದೊಂದು ಹೇಳಿಕೆಗಳು ವಿವಾದ ಹುಟ್ಟುಹಾಕುತ್ತಿದ್ದು, ಉಡುಪಿ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಇಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಇನ್ನು ಕಾಶ್ಮೀರಿ ಯುವತಿ ಹಿಜಾಬ್ ಧರಿಸುವುದಿಲ್ಲ ಎಂಬ ಹೇಳಿಕೆಯನ್ನು ಅನೇಕರು ಉಲ್ಲೇಖಿಸಿ ಪ್ರತಿಕ್ರಿಯಿಸಿದ್ದು, ಇದೀಗ ಜಮೀರ್ ಹೇಳಿಕೆಗೆ ಪರ ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ.