ಶ್ರೀಹರಿಕೋಟಾ,ಫೆ 14 (DaijiworldNews/MS): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪಿಎಸ್ಎಲ್ವಿ ಸಿ-52 ರಾಕೆಟ್ ಅನ್ನು ಯಶಸ್ವಿಯಾಗಿ ಇಂದು ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ರಾಕೆಟ್ ನಭಕ್ಕೆ ಚಿಮ್ಮಿತು. ಭೂ ಸರ್ವೇಕ್ಷಣಾ ಉಪಗ್ರಹ EOS-04 ಜೊತೆಗೆ NSPIREsat-1 ಮತ್ತು INS-2TD ಎಂಬ ಸಣ್ಣ ಉಪಗ್ರಹಗಳನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿತು.
EOS-04 ಉಪಗ್ರಹ 10 ವರ್ಷಗಳಷ್ಟು ಬಾಳ್ವಿಕೆ ಇರಲಿದೆ. ಈ ಭೂ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್ನಂತಹ ಅಪ್ಲಿಕೇಷನ್ಗಳಿಗಾಗಿ ಕೆಲಸ ಮಾಡಲಿದೆ.
ಉಡಾವಣೆ ನಂತರ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಪಿಎಸ್ಎಲ್ ವಿ-ಸಿ 52 ರ ಮಿಷನ್ ಯಶಸ್ವಿ ಉಡಾವಣೆಯನ್ನು ಸಾಧಿಸಲಾಗಿದೆ ಎಂದು ಹೇಳಿದ್ದಾರೆ.