ಮೈಸೂರು, ಫೆ 13 (DaijiworldNews/KP): ಗೊಮ್ಮಟೇಶ್ವರ ಮೂರ್ತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಲ್ಲಿ ದಿ ಇಂಡಿಯನ್ ನ್ಯೂ ನ್ಯಾಷನಲ್ ಪಾರ್ಟಿ ಅಧ್ಯಕ್ಷ ಅಯೂಬ್ ಖಾನ್ ಅವರನ್ನು ಮೈಸೂರು ನಗರದ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಿಮಗೇನಾದರೂ ಈ ದೇಶದ ಮೇಲೆ ಅನುಕಂಪ ಇದ್ದರೆ ಮೊದಲು ಅಶ್ಲೀಲವಾಗಿ ನಿಂತಿರತಕ್ಕಂತ ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ದಿಗಂಬರ ಜೈನ ಸಮಾಜವು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ದೂರು ನೀಡಿತ್ತು, ಈ ಹಿನ್ನಲೆಯಲ್ಲಿ ತನಿಖೆ ನಡೆಸಿದ್ದು, ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಪ್ರಸಾರ ಮಾಡಿದ ಖಾಸಗಿ ವಾಹಿನಿ ಮುಖ್ಯಸ್ಥ ವಿರುದ್ಧ 505,(2) ಅಡಿ ಪ್ರಕರಣ ದಾಖಲಿದ್ದು, ಅಯೂಬ್ ಖಾನ್ ವಿರುದ್ಧ 295 ಎ ಅಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ಸದ್ಯ ಅಯೂಬ್ ಖಾನ್ ಬಂಧಿಸಿ ಮೈಸೂರಿನ ನ್ಯಾಯಾಲಯುಕ್ಕೆ ಹಾಜರುಪಡಿಸಿದ್ದು, ನಂತರ ಅವರನ್ನು ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.