ತೆಲಂಗಾಣ, ಫೆ 13 (DaijiworldNews/KP): ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮದ ಹುಚ್ಚು ಹಿಡಿಸಿ ರಾಜ್ಯದಲ್ಲಿ ಶಾಂತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಧರ್ಮದ ಹುಚ್ಚು ಹಿಡಿಸಿ ರಾಜ್ಯದಲ್ಲಿ ಶಾಂತಿಯನ್ನು ನಾಶ ಮಾಡುತ್ತಿದ್ದಾರೆ, ಅಲ್ಲದೆ ಧರ್ಮದ ಹೆಸರಿನಲ್ಲಿ ಹೆಣ್ಣು ಮಕ್ಕಳು, ಚಿಕ್ಕ ಮಕ್ಕಳ ಮೇಲೆ ರಾಕ್ಷಸರಂತೆ ವರ್ತಿಸುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಧರ್ಮದ ಹುಚ್ಚು ಹಿಡಿಸಿ ಬೆಂಗಳೂರನ್ನ ಕಾಶ್ಮೀರವಾಗಿ ಪರಿಪರ್ತಿಸಲು ಹೊರಟಿದ್ದಾರೆ, ದೇಶದಲ್ಲಿ ಶಾಂತಿಯ ವಾತವರಣ ನಾಶವಾದರೆ ಗತಿಯೇನು? ಮಕ್ಕಳಿಗೆ ಉದ್ಯೋಗ ಅವಕಾಶ ಎಲ್ಲಿಂದ ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ.
ದೇಶದ ಅಭಿವೃದ್ಧಿ ಆಗಬೇಕಾದರೇ ಎಲ್ಲರು ಜಾತಿ, ಮತ, ಕುಲ ಬಿಟ್ಟು ನಾವೆಲ್ಲರೋ ಒಂದೇ ಎಂಬ ಭಾವನೆಯಲ್ಲಿ ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದ್ದಾರೆ.