ದೆಹಲಿ, ಫೆ 13 (DaijiworldNews/KP): ಮುಂದೊಂದು ದಿನ ಹಿಜಾಬಿ ಸಹ (ಹಿಜಾಬ್ ಧರಿಸಿದ ಹೆಣ್ಣುಮಗಳು) ದೇಶದ ಪ್ರಧಾನಿಯಾಗುತ್ತಾರೆ ಎಂದು ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೆಹದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಕರ್ನಾಟಕದ ಕಾಲೇಜೊಂದರಿಂದ ಹಿಜಾಬ್ ಬಗ್ಗೆ ಆರಂಭವಾದ ವಿವಾದವನ್ನು ತಡೆಯಲು ಆಗುತ್ತಿಲ್ಲ. ಸದ್ಯ ಹಿಜಾಬ್ ಗಲಾಟೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ, ಇದೀಗ ವಿಡಿಯೋದ ಮೂಲಕ ಮಾತನಾಡಿರುವ ಅವರು, ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು, ಹಿಜಾಬ್ ಧರಿಸುವ ಹೆಣ್ಣುಮಕ್ಕಳು ಜಿಲ್ಲಾಧಿಕಾರಿಯಾಗಬಹುದು, ವೈದ್ಯರಾಗಬಹುದು ಅಷ್ಟೇ ಏಕೆ? ಮುಂದೊಂದು ದಿನ ಈ ದೇಶದ ಪ್ರಧಾನಮಂತ್ರಿಯೂ ಆಗುತ್ತಾರೆ ಎಂದು ಹೇಳಿದ್ದಾರೆ.
ಈ ಹಿಂದೆ ಅಸಾದುದ್ದೀನ್ ಓವೈಸಿ ಅವರು ಹಿಜಾಬ್ ವಿವಾದದಲ್ಲಿ ಪುಟ್ಟಸ್ವಾಮಿ ತೀರ್ಪನ್ನು ಉಲ್ಲೇಖಿಸಿದ್ದರು. ಭಾರತದ ಸಂವಿಧಾನ ನಿಖಾಬ್ ಅಥವಾ ಹಿಜಾಬ್ ಧರಿಸುವ ಹಕ್ಕನ್ನು ನೀಡಿದೆ. ಪುಟ್ಟಸ್ವಾಮಿ ಅವರ ತೀರ್ಪಿನಲ್ಲಿ ಹಿಜಾಬ್ಗೆ ಅವಕಾಶ ನೀಡಲಾಗಿತ್ತು ಎಂದು ಓವೈಸಿ ಹೇಳಿದ್ದರು.
ಇತ್ತೀಚೆಗೆ ಪಾಕಿಸ್ತಾನ ಕೂಡ ಈ ವಿವಾದದಲ್ಲಿ ಮೂಗು ತೂರಿಸಿತ್ತು, ಅದಕ್ಕೆ ಉತ್ತರಿಸಿದ ಓವೈಸಿ, ನೀವು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ, ಭಾರತದ ಆಂತರಿಕ ವಿಚಾರಗಳಿಗೆ ಮೂಗು ತೂರಿಸಲು ಬರಬೇಡಿ ಎಂದಿದ್ದರು.
ಅಲ್ಲದೆ ಇನ್ನೊಂದೆಡೆ ಉತ್ತರ ಪ್ರದೇಶದಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಮಾತನಾಡಿದ ಓವೈಸಿ, ಯಾವುದೇ ಮುಸ್ಲಿಂ ಮಹಿಳೆ ಯಾವುದೇ ಭಯವಿಲ್ಲದೆ ಹಿಜಾಬ್ ಧರಿಸಬಹುದು ಎಂದು ಹೇಳಿದ್ದರು.