ನವದೆಹಲಿ, ಫೆ 13 (DaijiworldNews/HR): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು 2022ರ ವರ್ಷದ ಮೊದಲ ಉಪಗ್ರಹವನ್ನುಸೋಮವಾರದಂದು ಉಡಾವಣೆ ಮಾಡಲಿದೆ.
ಸಾಂದರ್ಭಿಕ ಚಿತ್ರ
ಪಿ.ಎಸ್.ಎಲ್.ವಿ.-ಸಿ.52/ಇಒಎಸ್-04 ಮಿಷನ್ ನ ಭಾಗವಾಗಿ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್ ನಿಂದ ಫೆಬ್ರವರಿ 14ರ ಸೋಮವಾರ ಬೆಳಿಗ್ಗೆ 5:59ಕ್ಕೆ ಪೋಲಾರ್ ಉಪಗ್ರಹ ಉಡಾವಣಾ ವಾಹನ, ಪಿಎಸ್ ಎಲ್ ವಿ-ಸಿ52 ಉಡಾವಣೆಗೆ ನಿಗದಿಯಾಗಿದೆ.
ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಇಸ್ರೋ, 2022ರ ಮೊದಲ ಉಪಗ್ರಹವನ್ನು ಫೆಬ್ರವರಿ 14ರ ಸೋಮವಾರದ ನಾಳೆ ನಡೆಯಲಿದ್ದು, 25 ಗಂಟೆ 30 ನಿಮಿಷಗಳ ಕೌಂಟ್ ಡೌನ್ ಪ್ರಕ್ರಿಯೆ ಭಾನುವಾರ ಬೆಳಿಗ್ಗೆ 4.29ಕ್ಕೆ ಪ್ರಾರಂಭವಾಗಿದೆ ಎಂದು ತಿಳಿಸಿದೆ.