ಶ್ರೀನಗರ, ಫೆ 13 (DaijiworldNews/KP): ದೇಶದ ಪ್ರತಿಯೊಬ್ಬ ನಾಗರಿಕನು ಕೂಡ ಬೇರೆಯವರ ಧಾರ್ಮಿಕ ಭಾವನೆಗಳಿಗೆ ಮತ್ತು ಭಾರತದ ಸಂವಿಧಾನವನ್ನು ಗೌರವಿಸಬೇಕು ಎಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದರು.
ಕರ್ನಾಟಕದಲ್ಲಿ ಸೃಷ್ಟಿಯಾದ ಹಿಜಾಬ್ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸದ್ಯ, ಹಿಜಾಬ್ ವಿವಾದವು ಕೋರ್ಟ್ನಲ್ಲಿ ಇರುವುದರಿಂದ ಇದರ ಬಗ್ಗೆ ಹೆಚ್ಚೇನೂ ಮತನಾಡಲಾಗದು, ಆದರೆ ಎಲ್ಲ ನಾಗರಿಕರು ಇತರರ ಧಾರ್ಮಿಕ ಭಾವನೆಗೆ ಗೌರವಿಸಬೇಕು ಎಂದರು.
ನಾನು ದೇಶದ ಜನರಿಗೆ ಎರಡು ವಿಚಾರದ ಬಗ್ಗೆ ಹೇಳಲು ಇಚ್ಚಿಸುತ್ತೇನೆ, ಇತರ ಧರ್ಮದವರ ಧಾರ್ಮಿಕ ಭಾವನೆಗೆ ಗೌರವಿಸುವುದರ ಜೊತೆಗೆ ಭಾರತೀಯ ಸಂವಿಧಾನವನ್ನು ಪರಮೋಚ್ಛವಾಗಿ ಪರಿಗಣಿಸಬೇಕು, ಈ ಎರಡು ವಿಚಾರವನ್ನು ಭಾರತೀಯರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.