ಬೆಂಗಳೂರು, ಫೆ 13 (DaijiworldNews/HR): ರಾಜ್ಯಾದ್ಯಾಂತ 2022-23ನೇ ಸಾಲಿನಿಂದ ಕೇವಲ 20 ಸಾವಿರ ಶಾಲೆಗಳಲ್ಲಿ ಮಾತ್ರವೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ ) ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, ಮುಂದಿನ ಶೈಕ್ಷಣಿಕ ವರ್ಷ ರಾಜ್ಯಾದ್ಯಾಂತ ಆಯ್ದ ಕೇವಲ 20 ಸಾವಿರ ಶಾಲೆಗಳಲ್ಲಿ ಮಾತ್ರವೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ನಿರ್ಧರಿದ್ದೇವೆ ಎಂದರು.
ರಾಜ್ಯದಲ್ಲಿ 60 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 6 ಸಾವಿರ ಅಂಗನವಾಡಿಗಳು ಶಾಲಾ ಕೇಂದ್ರಗಳಲ್ಲಿವೆ. ಮೂರು ನಾಲ್ಕು ಸಾವಿರ ಅಂಗನವಾಡಿಗಳು, ನೂರು, ಇನ್ನೂರು ಮೀಟರ್ ದೂರದಲ್ಲಿವೆ. ಇವುಗಳ್ನು ಶಾಲೆಯೊಂದಿಗೆ ಸಂಯೋಜಿಸಿ, ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿರುವ ಖಾಸಗಿ ಶಾಲೆಗಳನ್ನೊಳಗೊಂಡಂತೆ ಎನ್ಇಪಿ ಜಾರಿ ಮಾಡಲಾಗುವುದು ಎಂದಿದ್ದಾರೆ.
ಇನ್ನು ಈ ಬಾರಿಯ ಬಜೆಟ್ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಅನುದಾನ ನೀಡುವಂತೆಯೂ ಸಿಎಂಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.