ಬೆಂಗಳೂರು, ಫೆ 13 (DaijiworldNews/HR): ಹಿಜಾಬ್ ವಿವಾದವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿಷಯವನ್ನಾಗಿ ಮಾಡಲು ಕೆಲವು ಶಕ್ತಿಗಳು ಬಯಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಶಾಲಾ, ಕಾಲೇಜಿಗಳಲ್ಲಿ ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಮಕ್ಕಳು ಅಧ್ಯಯನದತ್ತ ಗಮನ ಹರಿಸಬೇಕಿತ್ತು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ, ಅವರು ಅಧ್ಯಯನದತ್ತ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಈಗಷ್ಟೇ ಶಾಲೆಗೆ ಹಿಂತಿರುಗಿದಾಗ ಹಿಜಾಬ್ ವಿವಾದ ಸೃಷ್ಟಿಯಾಗಿದ್ದು, ಶಿಕ್ಷಣ ಸಂಸ್ಥೆಗಳು ಎಲ್ಲರೂ ಭಾರತದ ಮಕ್ಕಳು ಎಂದು ವಿದ್ಯೆ ಕಲಿಸಬೇಕು ಎಂದಿದ್ದಾರೆ.
ಇನ್ನು ಹಿಜಾಬ್ ವಿವಾದದ ಹಿಂದೆ ಪಿತೂರಿ ಇದ್ದು, ಈ ಷಡ್ಯಂತ್ರದ ಹಿಂದಿರುವವರು ರಾಜ್ಯದ ಒಳಗಿನವರು ಹಾಗೂ ಹೊರಗಿನವರು. ಮೂಲಭೂತವಾದಿ ಶಕ್ತಿಗಳು ಜನರೊಂದಿಗೆ ಆಟವಾಡುತ್ತಿವೆ. ಅವರು ಹೇಗಾದರೂ ತಮ್ಮ ಶಕ್ತಿಯನ್ನು ಪ್ರದರ್ಶಿಸಲು ಬಯಸಿದಂತೆ ಅವರು ಸಂಸ್ಥೆಗಳ ಮೂಲಕ ಒಂದು ನಿರ್ದಿಷ್ಟ ರೀತಿಯ ಚಿಂತನೆಯನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.