ಶಿಗ್ಗಾವಿ ಫೆ 12 (DaijiworldNews/MS): ಎಲ್ಲಾ ಮಕ್ಕಳು ಯಾವುದೇ ಬೇಧ ಭಾವವಿಲ್ಲದೆ ಒಮ್ಮತದ ಮನಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡಬೇಕು. ಇದು ನನ್ನ ಮೊದಲನೆ ಕರ್ತವ್ಯ. ಆ ಕೆಲಸ ಮಾಡುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಮಾಧ್ಯಮದೊಂದಿಗೆ ಹಿಜಾಬ್ ವಿವಾದದ ಕುರಿತು ಮಾತನಾಡಿದ ಅವರು, ಮೊದಲು ರಾಜ್ಯದ ಎಲ್ಲೆಡೆ ಶಾಂತಿ ನೆಲೆಸಬೇಕು. ಶಾಲಾ -ಕಾಲೇಜುಗಳಲ್ಲಿ ಶಾಂತಿ ಇರಬೇಕು ಹಾಗೂ ಹೈಕೋರ್ಟ್ ಆಜ್ಞೆ ಪರಿಪೂರ್ಣವಾಗಿ ನಾವು ಜಾರಿ ಮಾಡಬೇಕು ಎಂದು ಹೇಳಿದ್ದಾರೆ.
ಇದೇ ವೇಳೇ ಹಿಜಾಬ್ ವಿಚಾರದ ಹಿಂದೆ ಕೆಲ ಸಂಘಟನೆಗಳ ಕೈವಾಡವಿದೆಯೇ ಎಂಬ ಪ್ರಶ್ನೆಗೆ , ಈ ವಿಚಾರಗಳನ್ನು ತನಿಖಾ ಏಜೆನ್ಸಿಯವರು ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.