ನವದೆಹಲಿ, ಫೆ 12 (DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುತ್ರ ಎಂಬುದಕ್ಕೆ ತಮ್ಮ ಪಕ್ಷ ಎಂದಿಗೂ ಪುರಾವೆಗಳನ್ನು ಕೇಳಲಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕೋವಿಡ್ ಸಾಂಕ್ರಮಿಕ ಕಾಯಿಲೆಯ ವಿರುದ್ಧ ಭಾರತದ ಕೈಗೊಂಡ ದಿಟ್ಟ ಕ್ರಮಗಳ ಬಗ್ಗೆ ಹಾಗೂ ಲಸಿಕೆಗಳ ಬಗ್ಗೆ ಪದೇ ಪದೇ ಅನುಮಾನಗಳನ್ನು ಹುಟ್ಟುಹಾಕಿದ್ದಕ್ಕಾಗಿ ಅವರು ಕಾಂಗ್ರೆಸ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ಗಳ ಪುರಾವೆ, ಲಸಿಕೆಯ ಸತ್ಯಾಸತ್ಯತೆಯನ್ನು ಕೇಳಿದೆ. ನಾವು ಎಂದಾದರೂ ರಾಹುಲ್ ಗಾಂಧಿಯವರ ಬಳಿ ರಾಜೀವ್ ಗಾಂಧಿಯವರ ಮಗ ಎಂಬುದಕ್ಕೆ ಪುರಾವೆ ಕೇಳಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ.
"ರಾಹುಲ್ ಗಾಂಧಿಯಾರು, ಕೆಲವೊಮ್ಮೆ ಅವರು ಭಾರತ ಒಂದು ರಾಷ್ಟ್ರವಲ್ಲ, ಆದರೆ ರಾಜ್ಯಗಳ ಒಕ್ಕೂಟ ಎಂದು ಕೇಳುತ್ತಾರೆ. ಇದನ್ನೆಲ್ಲಾ ನೋಡಿದಾಗ ಜಿನ್ನಾ ಆತ್ಮ ಕಾಂಗ್ರೆಸ್ಗೆ ಎಂಟ್ರಿ ಕೊಟ್ಟಿದೆಯೇನೋ ಅನ್ನಿಸುತ್ತದೆ. ಮದರಸಾಗಳನ್ನು ತೆರೆಯುವುದು ಸರಿ, ಮುಸ್ಲಿಂ ವಿಶ್ವವಿದ್ಯಾಲಯಗಳನ್ನು ತೆರೆಯುವುದು ಸರಿ ಎನ್ನುತ್ತಾರೆ. ಹಿಜಾಬ್ ಧರಿಸುವುದು ಸರಿ ಎಂದು ಅವರು ಹೇಳುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯವತ ಧ್ರುವೀಕರಣದ ರಾಜಕಾರಣ ಕೊನೆಗೊಳ್ಳುವುದೇ ಸರಿ. ಐದು ರಾಜ್ಯಗಳ ಚುನಾವಣೆಯ ನಂತರ ಇದು ದೊಡ್ಡ ಪ್ರಮಾಣದಲ್ಲಿ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ "ಎಂದು ತಿಳಿಸಿದ್ದಾರೆ